ಭದ್ರಾವತಿ | ಇಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ – 2000 ಪೊಲೀಸರ ನಿಯೋಜನೆ

By
1 Min Read

ಶಿವಮೊಗ್ಗ: ಇಂದು (ಸೆ.4) ಭದ್ರಾವತಿ (Bhadravati) ನಗರದ ಹಿಂದೂ ಮಹಾಸಭಾ ಗಣಪತಿ‌ (Hindu Mahasabha Ganapati) ವಿಸರ್ಜನಾ ಮೆರವಣಿಗೆ ಹಿನ್ನೆಲೆ ಪಟ್ಟಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

3 ಪೊಲೀಸ್ ಅಧೀಕ್ಷಕರು, 2 ಹೆಚ್ಚುವರಿ ಅಧೀಕ್ಷಕರು, 17 ಉಪ ಅಧೀಕ್ಷಕರು, 34 ಪೊಲೀಸ್ ನಿರೀಕ್ಷಕರು, 228 ಪೊಲೀಸ್ ಉಪನಿರೀಕ್ಷಕರು, 58 ಸಹಾಯಕ ಪೊಲೀಸ್ ಉಪನಿರೀಕ್ಷಕರು, 1690 ಪೊಲೀಸ್ ಹೆಡ್‍ಕಾನ್ಸ್‌ಟೇಬಲ್‌ಗಳ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಸೊರಬದ ಅತಿ ಎತ್ತರದ ಗಣೇಶ ʻಕುಬಟೂರು ಮಹಾರಾಜʼನಿಗೆ ವಿಶೇಷ ಪೂಜೆ ಸಲ್ಲಿಸಿದ ಮಧು ಬಂಗಾರಪ್ಪ

197 ಗೃಹರಕ್ಷಕ ದಳ ಸಿಬ್ಬಂದಿ, 5 ಡಿಎಆರ್ ತುಕಡಿ, 6 ಕೆಎಸ್‍ಆರ್‌ಪಿ ತುಕಡಿ, 1 ಕ್ಯೂಆರ್‌ಟಿ ತುಕಡಿ ಮತ್ತು 1 ಆರ್.ಎ.ಎಫ್ ಕಂಪನಿ ನಿಯೋಜನೆ ಮಾಡಲಾಗಿದೆ.

ಈ ಸಂಬಂಧ ಕಾರ್ಮಿಕರ ಭವನದಲ್ಲಿ ಎಸ್‍ಪಿ ಮಿಥುನ್ ಕುಮಾರ್ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಈದ್ ಮಿಲಾದ್ ಹೆಸರಲ್ಲಿ ಧರ್ಮಪ್ರಚಾರ – ಸಚಿವ ಜಮೀರ್ ನೇತೃತ್ವದ ಕಾರ್ಯಕ್ರಮಕ್ಕೆ ಭಾರಿ ವಿರೋಧ

Share This Article