ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ

Public TV
2 Min Read

ನವದೆಹಲಿ: ಇಂದು ಕನ್ನಡಿಗರಿಗೆ 66 ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಕನ್ನಡದಲ್ಲಿ ಸಂದೇಶ ಕಳುಹಿಸುವ ಮೂಲಕ ಕನ್ನಡಿಗರಿಗೆ ಶುಭಕೋರಿದ್ದಾರೆ.

ಮೋದಿ ಟ್ವಿಟ್ಟರ್ ನಲ್ಲಿ, ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕøಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’

ಈ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ಶುಭಕೋರಿ, ಕರ್ನಾಟಕದ ಉನ್ನತಿಯ ತುಡಿತವನ್ನು ಶ್ಲಾಘಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಕರ್ನಾಟಕವು ಅಭಿವೃದ್ಧಿಯ ಪಥದಲ್ಲಿ ಶರವೇಗದಲ್ಲಿ ಸಾಗಲಿದೆ, ಎಂದು ವಾಗ್ದಾನ ಮಾಡುತ್ತೇನೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

Koo App


ಇಂದು ಕನ್ನಡಿಗರಿಗೆ ಶುಭದಿನ. ಎಲ್ಲರೂ ಸಂಭ್ರಮದಲ್ಲಿ ಇರುವಂತಹ ದಿನ. ಆದರೆ ಕೋವಿಡ್ ಕಾರಣದಿಂದ ಅದ್ದೂರಿ ಆಚರಣೆಗೆ ಸ್ವಲ್ಪ ಕಡಿವಣವಿದ್ದು, ಈ ಹಿನ್ನೆಲೆ ಸರಳವಾಗಿ ರಾಜ್ಯೋತ್ಸವನ್ನು ಆಚರಿಸಲು ಸೂಚನೆಯನ್ನು ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *