ಅಮೆರಿಕ-ಭಾರತ ಸಂಬಂಧಕ್ಕೆ ಅತ್ಯುತ್ತಮ ನಾಯಕ: ಚುನಾವಣೆ ಫಲಿತಾಂಶ ಬಳಿಕ ಮೋದಿಗೆ ಯುಎಸ್ ಗಾಯಕಿ ಅಭಿನಂದನೆ

Public TV
1 Min Read

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ-ಭಾರತದ ಸಂಬಂಧಕ್ಕೆ ಅತ್ಯುತ್ತಮ ನಾಯಕ ಎಂದು ಅಮೆರಿಕದ ಗಾಯಕಿ, ನಟಿ ಮೇರಿ ಮಿಲ್‌ಬೆನ್ (Mary Millben) ಹಾಡಿ ಹೊಗಳಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ (Elections) ಈಗಾಗಲೇ 4 ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. 4 ರಾಜ್ಯಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ (BJP) ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆ ಎಕ್ಸ್‌ನಲ್ಲಿ ಬರೆದಿರುವ ಮೇರಿ ಮಿಲ್‌ಬೆನ್ ಬಿಜೆಪಿ ಗೆಲುವಿಗೆ ಮೋದಿಯವರನ್ನು ಅಭಿನಂದಿಸಿದ್ದಾರೆ.

ಎಕ್ಸ್ ಪೋಸ್ಟ್‌ನಲ್ಲೇನಿದೆ?
ಭಾರತದಲ್ಲಿ ಇಂದಿನ ಚುನಾವಣಾ ಫಲಿತಾಂಶಗಳು ಹೊರಬಿದ್ದಿದ್ದು, ಬಿಜೆಪಿ ದೇಶದ ಹೃದಯ ಭಾಗದ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಗೆದ್ದಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ 2024ರ ಪ್ರಬಲ ಗೆಲುವಿನ ಪೂರ್ವಭಾವಿಯಾಗಿದೆ. ಮೋದಿಯವರು ಭಾರತದ ಮೊದಲ ಅಭ್ಯರ್ಥಿ ಮತ್ತು ಅಮೆರಿಕ-ಭಾರತದ ಸಂಬಂಧಕ್ಕೆ ಅತ್ಯುತ್ತಮ ನಾಯಕರಾಗಿದ್ದಾರೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಮೂರು ರಾಜ್ಯಗಳ ಜನಾದೇಶ ಲೋಕಸಭೆಯ ಹ್ಯಾಟ್ರಿಕ್‌ ಗೆಲುವಿನ ಗ್ಯಾರಂಟಿ: ಮೋದಿ ಭರವಸೆ

ಈ ಹಿಂದೆಯೂ ಮೇರಿ ಮಿಲ್‌ಬೆನ್ ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಿಳೆಯರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾಗ ಅದನ್ನು ವಿರೋಧಿಸಿದ್ದರು. ಮಹಿಳೆಯರ ಪರವಾಗಿನ ನರೇಂದ್ರ ಮೋದಿಯವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದರು. ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಭಾರತೀಯ ನಾಗರಿಕರ ಪ್ರಗತಿಯ ಅತ್ಯತ್ತಮ ನಾಯಕ. ಅವರು ಯುಎಸ್‌ಗೆ ಉತ್ತಮ ನಾಯಕರಾಗಿದ್ದಾರೆ. ಅವರು ಮಹಿಳೆಯರ ಪರವಾಗಿ ನಿಂತಿದ್ದಾರೆ ಎಂದಿದ್ದರು. ಇದನ್ನೂ ಓದಿ: ಜನತಾ ಜನಾರ್ದನರಿಗೆ ನಮಿಸುತ್ತೇವೆ, ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು: ಮೋದಿ

Share This Article