ಬೆಂಗಳೂರು: ವಿದ್ಯುತ್ ಉಳಿತಾಯದ ಸಂದೇಶ ಸಾರುವ ಉದ್ದೇಶದಿಂದ ಬೆಸ್ಕಾಂನಿಂದ ನಗರದಲ್ಲಿ ವಾಕ್ ಥಾನ್ ಹಮ್ಮಿಕೊಳ್ಳಲಾಗಿತ್ತು.
ಇಂಧನ ಸಚಿವ ಡಿಕೆ ಶಿವಕುಮಾರ್, ನಟಿ ಮಯೂರಿ ಮತ್ತು ಪುಟ್ಟಗೌರಿ ಖ್ಯಾತಿ ರಂಜಿನಿ ಸೇರಿದಂತೆ ಹಲವು ಕಿರುತೆರೆ ನಟಿಯರು ವಾಕ್ ಥಾನ್‍ನಲ್ಲಿ ಪಾಲ್ಗೊಂಡಿದ್ದರು. ಕಂಠೀರವ ಸ್ಟೇಡಿಯಂನಿಂದ ಕಬ್ಬನ್‍ಪಾರ್ಕ್ ವರೆಗೆ ಜಾಗೃತಿ ಜಾಥ ನಡೆದಿದ್ದು, ವಿದ್ಯುತ್ ಉಳಿತಾಯ ಸಂದೇಶವನ್ನು ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಉಳಿತಾಯ ಮಾಡಬೇಕು. ವಿದ್ಯುತ್ ನ ಒಂದು ಯುನಿಟ್ ಉಳಿಸಿದರೆ, ನಾವು ಒಂದು ಯುನಿಟ್ ಸಂಪಾದನೆ ಮಾಡಿದಂತೆ ಆಗುತ್ತದೆ. ನಾವು ಇವತ್ತು ನೂರಾರು ಸೈಕಲ್ ಇಟ್ಟಿದ್ದೇವೆ. ಆ ಸೈಕಲಿನಲ್ಲಿ ವಿದ್ಯುತ್ ಜನರೇಟ್ ಮಾಡಬಹುದು. ಈ ರೀತಿ ಸೈಕಲ್ ನನ್ನು ಮನೆಯಲ್ಲಿ, ಜಿಮ್‍ಗಳಲ್ಲಿ ತುಳಿದರೆ ವಿದ್ಯುತ್ ಜನರೇಟ್ ಆಗುತ್ತದೆ. ನಮ್ಮ ಜನರಿಗೆ ಹಾಗೂ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿಯ ಒಂದು ಪ್ರಯೋಗ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.