ಎರಡು ತಿಂಗಳಲ್ಲಿ 27 ಸಾವಿರ ಟ್ರಾನ್ಸ್‌ ಫಾರ್ಮರ್ ನಿರ್ವಹಣೆ ಮಾಡಿದ ಬೆಸ್ಕಾಂ

Public TV
1 Min Read

ಬೆಂಗಳೂರು: ದುರಸ್ಥಿ ಸ್ಥಿತಿಯಲ್ಲಿರುವ ಟ್ರಾನ್ಸ್‌ ಫಾರ್ಮರ್ ನಿರ್ವಹಣೆಯನ್ನು ಮುಂದುವರಿಸಿರುವ ಬೆಸ್ಕಾಂ ಕಳೆದ ಎರಡು ತಿಂಗಳಿಂದೀಚೆಗೆ 27,787 ಟ್ರಾನ್ಸ್‌ ಫಾರ್ಮರ್‌ಗಳನ್ನು ತನ್ನ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ವಹಣೆ ಮಾಡಿದೆ.

ಮೇ 5 ರಂದು ರಾಜ್ಯಾದ್ಯಂತ ಚಾಲನೆ ದೊರೆತ ಟ್ರಾನ್ಸ್‌ ಫಾರ್ಮರ್‌ಗಳ ಅಭಿಯಾನವನ್ನು ಬೆಸ್ಕಾಂ ಮುಂದುವರಿಸಿದ್ದು, ನ್ಯೂನ್ಯತೆ ಹೊಂದಿರುವ ಹಾಗೂ ಅಸಮರ್ಪಕ ಗ್ರೌಂಡಿಂಗ್ ಸಮಸ್ಯೆ ಹೊಂದಿರುವ ಟ್ರಾನ್ಸ್‌ ಫಾರ್ಮರ್‌ಗಳನ್ನು ನಿರ್ವಹಣೆ ಮಾಡಿದೆ.

ಮೇ 5 ರಂದು ಟ್ರಾನ್ಸ್‌ ಫಾರ್ಮರ್ ಅಭಿಯಾನಕ್ಕೆ, ಇಂಧನ ಸಚಿವ ವಿ.ಸುನಿಲ್ ಕುಮಾರ್ ಚಾಲನೆ ನೀಡಿದ್ದರು. ಸಚಿವರ ಸೂಚನೆ ಮೇರೆಗೆ ಅಭಿಯಾನವನ್ನು ಮುಂದುವರಿಸಲಾಗಿದ್ದು, ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಟ್ರಾನ್ಸ್‌ ಫಾರ್ಮರ್‌ಗಳ ನಿರ್ವಹಣೆಯ ಗುರಿಯನ್ನು ಎಲ್ಲ ಎಸ್ಕಾಂಗಳಿಗೆ ನೀಡಲಾಗಿತ್ತು. ಇದನ್ನೂ ಓದಿ:  ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ – ಮಳೆ ದೇವನಿಗೆ ಸ್ಥಳೀಯರಿಂದ ವಿಶೇಷ ಪೂಜೆ 

ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಹಾಗೂ ಜನನಿಬಿಢ ಪ್ರದೇಶಗಳಲ್ಲಿರುವ ಟ್ರಾನ್ಸ್‌ ಫಾರ್ಮರ್‌ಗಳ ಸಮಗ್ರ ನಿರ್ವಹಣೆಗೆ ಬೆಸ್ಕಾಂ ಕ್ರಮಕೈಗೊಂಡಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಮೇ 5 ರಿಂದ ಜುಲೈ 12 ವರೆಗೆ ನಿರ್ವಹಣೆ ಮಾಡಿರುವ 27,787 ಟ್ರಾನ್ಸ್‌ ಫಾರ್ಮರ್‌ಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ 9,524 ಟ್ರಾನ್ಸ್‌ ಫಾರ್ಮರ್‌ಗಳ ನಿರ್ವಹಣೆಯನ್ನು ಬೆಸ್ಕಾಂ ಮಾಡಿದೆ. ತುಮಕೂರು ಜಿಲ್ಲೆ- 5,232, ದಾವಣಗೆರೆ ಜಿಲ್ಲೆ- 2,906, ಚಿತ್ರದುರ್ಗ- 2,291, ಚಿಕ್ಕಬಳ್ಳಾಪುರ ಜಿಲ್ಲೆ- 2,646, ರಾಮನಗರ ಜಿಲ್ಲೆ- 2,372 ಮತ್ತು ಕೋಲಾರ ಜಿಲ್ಲೆಯಲ್ಲಿ 1,429 ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಯನ್ನು ಬೆಸ್ಕಾಂ ಪೂರ್ಣಗೊಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ವಹಣೆ ಮಾಡಿರುವ 9,524 ಟ್ರಾನ್ಸ್‌ ಫಾರ್ಮರ್‌ಗಳ ಪೈಕಿ ಬೆಸ್ಕಾಂನ ದಕ್ಷಿಣ ವೃತ್ತ- 2,713, ಪಶ್ಚಿಮ ವೃತ್ತ- 2,253, ಪೂರ್ವ ವೃತ್ತ- 1,961 ಮತ್ತು ಉತ್ತರ ವೃತ್ತದಲ್ಲಿ 1,946 ಟ್ರಾನ್ಸ್‌ ಫಾರ್ಮರ್‌ಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *