ರಾಜ್ಯದ ಜನತೆಗೆ ಕರೆಂಟ್ ಶಾಕ್ – ವಿದ್ಯುತ್ ದರ ಏರಿಕೆಗೆ ಕೆಇಆರ್‌ಸಿ ಚಿಂತನೆ

By
1 Min Read

ಬೆಂಗಳೂರು: ವಿದ್ಯುತ್ ದರ ಏರಿಕೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC) ಚಿಂತನೆ ನಡೆಸಿದೆ.

ಪ್ರತಿ ಯೂನಿಟ್‍ಗೆ 50-60 ಪೈಸೆ ಏರಿಕೆಗೆ ಎಸ್ಕಾಂಗಳು ಕೆಇಆರ್‌ಸಿ ಮುಂದೆ ಪ್ರಸ್ತಾವನೆ ಇಟ್ಟಿವೆ. ಇದರಿಂದ ಈ ವರ್ಷ ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ಬೆಲೆ ಏರಿಕೆಯಾಗುವ (Electricity Rate Hike) ಸಾಧ್ಯತೆ ಇದೆ.

ಯೂನಿಟ್‍ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಬೆಸ್ಕಾಂ (BESCOM) ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯಂತೆ ಉತ್ಪಾದನೆಯ ಖರ್ಚು-ವೆಚ್ಚ ಮತ್ತು ನಿರ್ವಹಣೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಕೆಇಆರ್‌ಸಿ ಮುಂದಾಗಿದೆ. ಇದನ್ನೂ ಓದಿ: ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಡಿನ್ನರ್‌ ಪಾಲಿಟಿಕ್ಸ್‌ – ಒಂದೂವರೆಗೆ ಗಂಟೆ ಏನು ಚರ್ಚೆ ನಡೆದಿದೆ?

ಸದ್ಯ ಪ್ರಸ್ತಾವನೆ ಪರಿಶೀಲಿಸಲಿರುವ ಆಯೋಗ, ಗ್ರಾಹಕ ಮತ್ತು ಬೆಸ್ಕಾಂ ಇಬ್ಬರಿಗೂ ಹೊರೆಯಾಗದಂತೆ ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಜಾರಿ ಮಾಡುವ ಸಾಧ್ಯತೆಯಿದೆ. ಬೆಸ್ಕಾಂ ಮಾತ್ರವಲ್ಲದೇ ಉಳಿದ ನಾಲ್ಕು ಎಸ್ಕಾಂಗಳಿಂದಲೂ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ನಾಲ್ಕು ಎಸ್ಕಾಂಗಳಿಂದ 50-60 ಪೈಸೆ ದರ ಪರಿಷ್ಕರಣೆಗೆ ಪ್ರಸ್ತಾಪ ಸಲ್ಲಿಕೆಯಾಗಿದೆ.

ಎಲ್ಲಾ ಪರಿಷ್ಕೃತ ದರಗಳು ಏಪ್ರಿಲ್ 1 ರಿಂದಲೇ ಜಾರಿಯಾಗುವ ಸಾಧ್ಯತೆ ಇದ್ದು, ರಾಜ್ಯದ ಜನರಿಗೆ ವಿದ್ಯುತ್ ದರದ ಬಿಸಿ ತಟ್ಟಲಿದೆ. ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ಯುಎಇ ಅಧ್ಯಕ್ಷರೊಂದಿಗೆ ಮೋದಿ ರೋಡ್ ಶೋ

Share This Article