Bengaluru | ಲೇಡಿಸ್ ಪಿಜಿಗೆ ನುಗ್ಗಿ ಎಂಜಿನಿಯರ್ ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದರೋಡೆ

Public TV
1 Min Read

ಬೆಂಗಳೂರು: ಪಿಜಿಯಲ್ಲಿದ್ದ ಬೆಸ್ಕಾಂ ಅಸಿಸ್ಟೆಂಟ್ ಎಂಜಿನಿಯರ್ (BESCOM Assistant Engineer) ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದೋಚಿದ (Gold Theft) ಘಟನೆ ಯಲಹಂಕ (Yelahanka) ಪೊಲೀಸ್ ಠಾಣಾ ವ್ಯಾಪ್ತಿಯ ಜುಡಿಷಿಯಲ್ ಲೇಔಟ್‌ನಲ್ಲಿ ನಡೆದಿದೆ.

ಆ.11ರಂದು ಮಧ್ಯಾಹ್ನ 3ಗಂಟೆ ಸುಮಾರಿಗೆ ಲೇಡಿಸ್ ಪಿಜಿಯಲ್ಲಿ (Ladies PG) ಘಟನೆ ನಡೆದಿದೆ. ಕಳೆದ ಹದಿನೈದು ದಿನಗಳ ಹಿಂದಷ್ಟೇ ಪಿಜಿಗೆ ಸೇರಿದ್ದ ಮಹಿಳೆ ಮಧ್ಯಾಹ್ನ ಊಟಕ್ಕೆಂದು ರೂಮಿಗೆ ಬಂದಿದ್ದಾರೆ. ಪಿಜಿಯಲ್ಲಿನ ಮೂರನೇ ಮಹಡಿಯಲ್ಲಿರೋ ತನ್ನ ರೂಮಿಗೆ ಬಂದಾಗ, ಡೋರ್ ಬಡಿದ ಶಬ್ದ ಕೇಳಿ ಪಿಜಿಯವರು ಇರಬಹುದು ಎಂದು ಡೋರ್ ಓಪನ್ ಮಾಡಿದ್ದರು. ಕೂಡಲೇ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದ ಆರೋಪಿ ಆಕೆಯ ಅಂಗಾಂಗಗಳನ್ನ ಮುಟ್ಟಿ, ಆಕೆ ಮೈಮೇಲಿದ್ದ ಚಿನ್ನಾಭರಣಗಳನ್ನ ಬಿಚ್ಚಿಸಿಕೊಂಡು ಆಕೆಯ ಬೆಡ್ ಮೇಲಿದ್ದ ಎರಡು ಮೊಬೈಲ್‌ಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; 16 ಸ್ಪಾಟ್‌ಗಳಲ್ಲಿ ಸಿಗದ ಕುರುಹು – ದೂರುದಾರನ ಮಂಪರು ಪರೀಕ್ಷೆಗೆ ಎಸ್‌ಐಟಿ ಚಿಂತನೆ

Share This Article