ಬೆಂಗಳೂರು ನಾಗರಿಕರಿಗೆ ಸಿದ್ದು ಸರ್ಕಾರದಿಂದ ನೊರೆ ಭಾಗ್ಯ!

Public TV
1 Min Read

ಬೆಂಗಳೂರು: ಇಂದಿರಾ ಕ್ಯಾಂಟೀನ್ ಆರಂಭಿಸಿ ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಷ್ಟ್ರಮಟ್ಟದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ. ಬಡವರಿಗೆ ಅನ್ನ ಭಾಗ್ಯ ನೀಡಿದ್ದೇವೆ ಅಂತ ಹೇಳಿಕೊಳ್ಳುವ ಸರ್ಕಾರ, ಬೆಂಗಳೂರಿನ ನಾಗರಿಕರಿಗೆ ನೊರೆ ಭಾಗ್ಯವನ್ನು ಕರುಣಿಸಿದೆ.

ಮಳೆಯ ಅವಾಂತರದ ಜೊತೆಗೆ ಬೆಳ್ಳಂದೂರು ಕೆರೆಯಲ್ಲಿ ಹೆಚ್ಚುತ್ತಿರುವ ನೊರೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಮಾನ ಮಾರ್ಯಾದೆ ಹರಜಾಗಿದೆ. ಗುರುವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ ಜಿಟಿ) ಬೆಳ್ಳಂದೂರು ಕೆರೆಯ ನೊರೆಯ ವಿಚಾರ ಪ್ರಸ್ತಾಪಿಸಿ, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ನೊರೆಯ ಉತ್ಪತ್ತಿಯನ್ನು ಕಡಿಮೆ ಮಾಡಲು ಕೈಗೊಂಡಿರುವ ಕ್ರಮವೇನು ಅಂತ ಮುಖ್ಯ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದೆ. ಮುಂದಿನ ಮಂಗಳವಾರದೊಳಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.

ಇಂದಿರಾ ಕ್ಯಾಂಟೀನ್‍ಗೆ ನೀಡಿದ್ದಷ್ಟು ಆದ್ಯತೆ, ಬೆಂಗಳೂರು ನಾಗರಿಕರ ಸುರಕ್ಷತೆಗೆ ಏಕೆ ನೀಡಿಲ್ಲ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಮಳೆಯಿಂದಾಗಿ ಕೆರೆಯಂತಾಗುವ ಬೆಂಗಳೂರು ಹಾಗೂ ಬೀದಿ ನಾಯಿಗಳ ಉಪಟಳದಿಂದಾಗಿ ಜನರು ಆತಂಕದಿಂದ ಬದುಕು ಬೇಕಾದ ಸ್ಥಿತಿ ಈಗ ವೈರಲ್ ಆಗಿದೆ.

https://youtu.be/syYAEeLN9wc

 

https://youtu.be/xnzq3jBfyMs

Share This Article
Leave a Comment

Leave a Reply

Your email address will not be published. Required fields are marked *