ರೂಂ ನಂಬರ್ ನೀಡಿ ರೂಂಗೆ ಬನ್ನಿ ಎಂದಿದ್ರು – ಅರ್ಜುನ್ ಸರ್ಜಾ ವಿರುದ್ಧ ಬೆಂಗ್ಳೂರು ಗೃಹಿಣಿ ಆರೋಪ

Public TV
1 Min Read

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮೀ ಟೂ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಗೃಹಿಣಿಯೊಬ್ಬರು ತಮ್ಮ ಜೊತೆಯಲ್ಲೂ ಅರ್ಜುನ್ ಸರ್ಜಾ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ.

ಸ್ಟೂಡೆಂಟ್ಸ್ ಕ್ರೌಡ್ ಸೀನ್ ನಲ್ಲಿ ಭಾಗವಹಿಸುವಾಗ ಅನುಚಿತ ವರ್ತನೆ ಮಾಡಿದ್ದಾರೆ ಎಂದು ಅರ್ಜುನ್ ಸರ್ಜಾ ವಿರುದ್ಧ ಗೃಹಿಣಿಯೊಬ್ಬರು ಆರೋಪ ಮಾಡುತ್ತಿದ್ದಾರೆ. ಈ ಘಟನೆ 15 ವರ್ಷಗಳ ಹಿಂದೆ ನಡೆದಿದ್ದು, ಗೃಹಿಣಿ ಈಗ ಮೀ ಟೂ ಅಭಿಯಾನದ ಮೂಲಕ ಬಹಿಪಡಿಸಿದ್ದಾರೆ.

ಗೃಹಿಣಿ ಆರೋಪವೇನು?
ಮೈಸೂರಿನಲ್ಲಿ ‘ಅರ್ಜುನುಡು’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗೃಹಿಣಿಯಾದ ನಾನು ಮೂರು ದಿನ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದೆ. ನನ್ನ ಜೊತೆ ಇಪ್ಪತ್ತು ವಿದ್ಯಾರ್ಥಿನಿಯರು ಪಾರ್ಟ್ ಟೈಂ ಕೆಲಸದಲ್ಲಿ ಶೂಟಿಂಗ್ ಸೀನ್ ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅರ್ಜುನ್ ಸರ್ಜಾ ಅವರು ಅಷ್ಟು ವಿದ್ಯಾರ್ಥಿನಿಯರ ನಂಬರ್ ಕೇಳಿದ್ದರು. ಅಷ್ಟೇ ಅಲ್ಲದೇ ಅವರ ರೂಂ ನಂಬರ್ ಕೊಟ್ಟು, ರೂಮಿಗೆ ಬನ್ನಿ, ರೆಸಾರ್ಟ್ ಇದೆ ನನ್ನದು ಅಂತಾ ಕರೆದಿದ್ದರು ಎಂದು ಆರೋಪ ಮಾಡಿದ್ದಾರೆ.

ನನ್ನ ಅನೇಕ ಸ್ನೇಹಿತೆಯರು ಚಾನ್ಸ್ ಗಾಗಿ ಅರ್ಜುನ್ ಸರ್ಜಾ ರೂಮಿಗೆ ಹೋಗಿದ್ದರು. ಅಲ್ಲಿ ಅವರ ಜೊತೆ ಅರ್ಜುನ್ ಸರ್ಜಾ ಮಿಸ್ ಬಿಹೇವ್ ಮಾಡಿದ್ದಾರೆ. ಬಹುಭಾಷಾ ನಟ ಕೂಡ ಪ್ರಕಾಶ್ ರೈ ಕೂಡ ಈ ಸಿನಿಮಾದಲ್ಲಿ ಇದ್ದರು. ಅರ್ಜುನ್ ಸರ್ಜಾ ನಮ್ಮ ಜೊತೆ ಮಾತನಾಡುವ ಅವಶ್ಯಕತೆ ಇಲ್ಲದೇ ಇದ್ದರೂ ನಮ್ಮ ತಂಡದ ಲೀಡರ್ ಜೊತೆ ಕೋ ಆರ್ಡಿನೇಟ್ ಮಾಡಿ, ಅವರಿಗೆ ಒಂದಿಷ್ಟು ದುಡ್ಡು ಕೊಟ್ಟು ನಮ್ಮ ತಂಡದ ಹುಡುಗಿಯನ್ನು ರೂಮಿಗೆ ಕರೆಸಿಕೊಂಡಿದ್ದರು.

ಸುದೀಪ್ ಅಭಿನಯದ ‘ಸ್ಪರ್ಶ’ ಸಿನಿಮಾ ಮತ್ತು ಉಪೇಂದ್ರ ಸಿನಿಮಾದಲ್ಲೂ ಪಾಲ್ಗೊಂಡಿದ್ದೆವು. ಆದರೆ ಸರ್ಜಾ ಜೊತೆ ಕೆಟ್ಟ ಅನುಭವ ಆಗಿತ್ತು. ಆಮೇಲೆ ನಾವು ಇದನ್ನು ವಿರೋಧಿಸಿ ಸಿನಿಮಾ ಶೂಟಿಂಗ್ ಗೆ ಹೋಗುವುದನ್ನು ಬಿಟ್ಟೆವು ಎಂದು ಗೃಹಿಣಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *