41,000 ರೂ.ಗೆ ವಾಟರ್‌ ಡಿಸ್ಪೆನ್ಸರ್‌ ಮಾರಾಟಕ್ಕೆ ಬೆಂಗ್ಳೂರು ಮಹಿಳೆ ಯತ್ನ – ರೇಟ್‌ ನೋಡಿ ನೆಟ್ಟಿಗರು ಶಾಕ್‌!

Public TV
1 Min Read

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಮಹಿಳೆಯೊಬ್ಬರು (Bengaluru Women) ವಾಟರ್‌ ಡಿಸ್ಪೆನ್ಸರ್‌ ಅನ್ನು ನೂರು, ಇನ್ನೂರಲ್ಲ ಬರೋಬ್ಬರಿ 41,000 ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಮಹಿಳೆ ಹೇಳಿದ ದರ ಕೇಳಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಫೇಸ್ಬುಕ್ ಬಳಕೆದಾರರಾದ ಮೇಘನಾ ಅಲ್ಲಾ ಅವರು ಒಂದು ಪೋಸ್ಟ್‌ ಹಾಕಿದ್ದಾರೆ. ಪೋಸ್ಟ್‌ನಲ್ಲಿ, 2 ನೀರಿನ ಕ್ಯಾನ್‌ ಜೊತೆಗೆ ವಾಟರ್‌ ಡಿಸ್ಪೆನ್ಸರ್‌ (Water Dispenser) ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಬೆಲೆ 500 ಡಾಲರ್‌ (ಅಂದಾಜು 41,000 ರೂಪಾಯಿ). ಬೆಂಗಳೂರಿನಿಂದ ಹೊರಗೆ ಹೋಗುತ್ತಿರುವುದರಿಂದ ಇದನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಹಿಜಬ್‌ ನಿಷೇಧ ವಾಪಸ್‌: ಸಿಎಂ ಸಿದ್ದರಾಮಯ್ಯ ಘೋಷಣೆ

ವಾಟರ್‌ ಡಿಸ್ಪೆನ್ಸರ್‌ ಮಾರಾಟಕ್ಕೆ ಅವರು ವಿಧಿಸಿರುವ ರೇಟ್‌ ಕೇಳಿ ಜನ ಬೆಚ್ಚಿಬಿದ್ದಿದ್ದಾರೆ. ಬರೋಬ್ಬರಿ 41,000 ರೂ. ಇದನ್ನು ಕೆಲವರು ಗೇಲಿ ಮಾಡಿದ್ದಾರೆ. ಮಹಿಳೆಯ ಪೋಸ್ಟ್‌ಗೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ ಮಾಡುತ್ತಿದ್ದಾರೆ.

ಮಹಿಳೆಯ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದಕ್ಕೆ ನೆಟ್ಟಿಗರು ನಾನಾ ರೀತಿ ಕಾಮೆಂಟ್‌ ಮಾಡುತ್ತಿದ್ದಾರೆ. ‘ಇದು ಸಾರಿಗೆ ವೆಚ್ಚವನ್ನೂ ಒಳಗೊಂಡಿದೆಯೇ’ ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿ ಕಾಮೆಂಟ್‌ ಮೂಲಕ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಏಪ್ರಿಲ್ 20, 21 ರಂದು ಸಿಇಟಿ ಪರೀಕ್ಷೆ – ಜನವರಿ 10 ರಿಂದ ಅರ್ಜಿ ಸಲ್ಲಿಕೆ ಆರಂಭ: ಕೆಇಎ

‘ವಾಟರ್‌ ಡಿಸ್ಪೆನ್ಸರ್‌ಗೆ 500 ಡಾಲರ್‌ ದರ ಸ್ವಲ್ಪ ದುಬಾರಿಯಾಯಿತು’ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್‌ ಮಾಡಿದ್ದಾರೆ. ‘ನೀರನ್ನೂ ಸೇರಿಸಿ ರೇಟ್‌ ಹಾಕಿದ್ದೀರಾ’ ಎಂದು ಇನ್ನೊಬ್ಬರು ಗೇಲಿ ಮಾಡಿ ಪ್ರಶ್ನಿಸಿದ್ದಾರೆ. ‘ಈ ರೀತಿಯ ಪೋಸ್ಟ್‌ ಮೂಲಕ ಏನು ಹೇಳಲು ಹೊರಟಿದ್ದೀರಿ’ ಎಂದು ಒಬ್ಬರು ಪ್ರಶ್ನಿಸಿದ್ದಾರೆ.

Share This Article