ಜ.23 ರಂದು ಬೆಂಗಳೂರಿಗೆ ನೀರು ಬರಲ್ಲ – ಯಾವ ಪ್ರದೇಶದಲ್ಲಿ ಸಮಸ್ಯೆ?

Public TV
1 Min Read

ಬೆಂಗಳೂರು: ಜನವರಿ 23 ರಂದು ಬೆಂಗಳೂರಿನ ಕೆಲ ಪ್ರದೇಶದಲ್ಲಿ ನೀರು ಸರಬರಾಜು ಸಂಪೂರ್ಣ ವ್ಯತ್ಯಯವಾಗಲಿದೆ. ದುರಸ್ಥಿ ಕಾಮಗಾರಿಯ ಸಲುವಾಗಿ 23ರಂದು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೂ ಸರಬರಾಜು ಬಂದ್ ಮಾಡಲಾಗುತ್ತೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಕಾವೇರಿ ನೀರು ಸರಬರಾಜು ಯೋಜನೆ 1,2,3 ನೇ ಹಂತದ ಟಿಕೆ ಹಳ್ಳಿ, ತಾತಗುಣಿ ಯಂತ್ರಗಾರಗಳಲ್ಲಿ ದುರಸ್ಥಿ ಕಾಮಗಾರಿಯ ಸಲುವಾಗಿ ದಿನ ಪೂರ್ತಿ ಕಾವೇರಿ ನೀರು ಸರಬರಾಜು ಸಂಪೂರ್ಣ ಬಂದ್ ಆಗಲಿದೆ.

ಎಲ್ಲೆಲ್ಲಿ ಸ್ಥಗಿತ?
ಜಯನಗರ, ಜೆಪಿನಗರ, ಬಸವನಗುಡಿ, ಬನಶಂಕರಿ, 2 ಮತ್ತು 3ನೇ ಹಂತ, ಚಾಮರಾಜಪೇಟೆ, ಬನಗಿರಿ ನಗರ, ಹೊಸಕೆರೆಹಳ್ಳಿ, ಎಮ್ ಎನ್ ಕೆ, ವಿವಿ ಪುರಂ, ಕುಮಾರಸ್ವಾಮಿ ಲೇಔಟ್, ಪದ್ಮನಾಭ ನಗರ, ಬೈರಸಂದ್ರ, ಜಾನ್ಸನ್ ಮಾರ್ಕೆಟ್, ಆಡುಗೋಡಿ, ದೊಮ್ಮಲೂರು, ಬಿಟಿಎಂ ಲೇಔಟ್, ಸಿಎಲ್‍ಆರ್, ಬಾಪೂಜಿ ನಗರ, ಮೈಸೂರು ರಸ್ತೆ, ಶ್ರೀ ರಾಮಪುರ, ಓಕಳೀಪುರ, ಇಂದಿರಾನಗರ 1 ನೇ ಹಂತ, ಶ್ರೀನಗರ, ಹಲಸೂರು, ಶಾಂತಿನಗರ, ಕೋರಮಂಗಲ, ವಿಜಯನಗರ, ಚೋಳರ ಪಾಳ್ಯ, ಜೀವನ್ ಭೀಮಾನಗರ, ವಿಲ್ಸನ್ ಗಾರ್ಡನ್, ಹೋಂಬಾಳೆ ಗೌಡ ನಗರ, ನೀಲಸಂದ್ರ, ಕೆ ಆರ್ ಮಾರುಕಟ್ಟೆ, ಯಶವಂತಪುರದಲ್ಲಿ ಬಂದ್ ಅಗಲಿದೆ.

ಇದರ ಜೊತೆಗೆ ಮಲ್ಲೇಶ್ವರಂ, ಮತ್ತಿಕೆರೆ, ಗೋಕುಲ್ ಎಕ್ಸಟೆನ್ಷನ್, ಜೈಮಹಲ್, ವಸಂತನಗರ, ಆರ್ ಎಸ್ ಪಾಳ್ಯ, ಜಾನಕಿರಾಮ ಲೇಔಟ್, ಲಿಂಗರಾಜಪುರ, ಮುತ್ಸಲ್ಯ ನಗರ, ಆರ್ ಟಿ ನಗರ, ಸಂಜಯ್ ನಗರ, ಸದಾಶಿವ ನಗರ, ಹೆಬ್ಬಾಳ, ಪ್ಯಾಲೇಸ್ ಗುಟ್ಟಹಳ್ಳಿ, ಭಾರತಿ ನಗರ, ಸುದಾಮ ನಗರ, ಮಚಲಿ ಬೆಟ್ಟ, ಫ್ರೇಜರ್ ಟೌನ್, ಪಿಳ್ಳಣ್ಣ ಗಾರ್ಡನ್, ಬನ್ನಪ್ಪ ಪಾರ್ಕ್, ಶಿವಾಜಿನಗರ, ಚಿಕ್ಕ ಲಾಲ್ ಬಾಗ್, ಗವಿಪುರ, ಬ್ಯಾಟ್ರಯನಪುರ, ಮೆಜೆಸ್ಟಿಕ್, ಕಸ್ತೂರಿ ಬಾ ರಸ್ತೆ, ಮಡಿವಾಳ, ಎಲಚೇನಹಳ್ಳಿ, ಇಸ್ರೋ ಲೇಔಟ್, ಪೂರ್ಣಪ್ರಜ್ಞಾ ಲೇಔಟ್, ಮುನೇಶ್ವರ ನಗರ, ಸಂಪಂಗಿರಾಮ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆ ಸಂಪೂರ್ಣ ಬಂದ್ ಆಗಲಿದೆ.

Share This Article
Leave a Comment

Leave a Reply

Your email address will not be published. Required fields are marked *