ಟ್ರಾಫಿಕ್‌ ಸಮಸ್ಯೆ ಒಳ್ಳೆಯದು, ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ: ಪ್ರಿಯಾಂಕ್‌ ಖರ್ಗೆ ವ್ಯಾಖ್ಯಾನ

Public TV
2 Min Read

ಬೆಂಗಳೂರು: ಟ್ರಾಫಿಕ್‌ ಸಮಸ್ಯೆ (Traffic Problem) ಒಳ್ಳೆಯದು, ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೊಸ ವ್ಯಾಖ್ಯಾನ ಕೊಟ್ಟಿದ್ದಾರೆ.

Mobility Symposium 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಜನಸಂಖ್ಯೆಯ ಸುಮಾರು 75.5 ಪ್ರತಿಶತ ಜನರು ಕೆಲಸ ಮಾಡುವ ಜನಸಂಖ್ಯೆಯ ಭಾಗವಾಗಿದ್ದಾರೆ. ನಾವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದ್ದೇವೆ. ಹಾಗೆ ನೋಡಿದರೆ ಟ್ರಾಫಿಕ್‌ ಸಮಸ್ಯೆ ಒಂದು ಲೆಕ್ಕದಲ್ಲಿ ಒಳ್ಳೆಯದು. ಇದು ನಾವು ಬೆಳೆಯುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. ಆದರೂ ಟ್ರಾಫಿಕ್‌ ಸಮಸ್ಯೆಯನ್ನು ನಾವು ಬಗೆ ಹರಿಸಿಕೊಳ್ಳಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿರುವ ಕಾರಣ ಅತಿ ಹೆಚ್ಚು ಸಂಖ್ಯೆಯ ವಲಸಿಗರನ್ನು ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಈಗ ಸುಮಾರು ಸುಮಾರು 82 ಲಕ್ಷ ದ್ವಿಚಕ್ರ ವಾಹನಗಳು ಮತ್ತು 25 ಲಕ್ಷ ನಾಲ್ಕು ಚಕ್ರಗಳ ವಾಹನಗಳು ಸೇರಿ ಒಟ್ಟು 1.2 ಕೋಟಿ ನೋಂದಾಯಿತ ವಾಹನಗಳಿವೆ ಎಂದರು.

ತನ್ನ ಹೇಳಿಕೆಗೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಪ್ರಿಯಾಕ್‌ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡಿದ್ದಾರೆ. ನಾವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಮುಂದಿನ ದಶಕದಲ್ಲಿ ನಮ್ಮ ಜಿಡಿಪಿ ವಾರ್ಷಿಕವಾಗಿ 8.5% ಕ್ಕಿಂತ ಹೆಚ್ಚು ಬೆಳೆಯುವ ನಿರೀಕ್ಷೆಯಿದೆ. ಕಳೆದ ವರ್ಷ ಬೆಂಗಳೂರಿನ ರಸ್ತೆಗಳಿಗೆ 7 ಲಕ್ಷಕ್ಕೂ ಹೆಚ್ಚು ಹೊಸ ವಾಹನಗಳು ಇಳಿದಿವೆ. ಆಗಸ್ಟ್ 2025 ರಲ್ಲಿ 58,913 ಹೊಸ ವಾಹನಗಳನ್ನು ನೋಂದಾಯಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂಖ್ಯೆಗಳು ಬೆಳೆಯುತ್ತಿರುವ ನಗರದ ಪ್ರತಿಬಿಂಬವಾಗಿದ್ದರೂ ಇದು ನಮ್ಮ ರಸ್ತೆಗಳು ಏಕೆ ಬಿರುಕು ಬಿಡುತ್ತಿವೆ ಎಂಬುದರ ಸೂಚನೆಯಾಗಿದೆ. ಸರ್ಕಾರ ತಜ್ಞರು ಮತ್ತು ಕಾರ್ಪೊರೇಟ್‌ಗಳ ಸಹಯೋಗದೊಂದಿಗೆ ಈ ಸವಾಲುಗಳನ್ನು ಪರಿಹರಿಸುತ್ತಿದೆ ಎಂದು ತಿಳಿಸಿದರು.

Share This Article