ವಾಹನ ಸವಾರರ ಗಮನಕ್ಕೆ – ಬೆಂಗಳೂರಿನ ಈ ರಸ್ತೆಯಲ್ಲಿ 45 ದಿನ ಸಂಚಾರ ಬಂದ್

Public TV
1 Min Read

ಬೆಂಗಳೂರು: ಔಟರ್ ರಿಂಗ್ ರೋಡ್‌ನ (Outer Ring Road) 9ನೇ ಮೇನ್ ಜಂಕ್ಷನ್ ನಿಂದ 5ನೇ ಮೇನ್‌ವರೆಗಿನ ಸರ್ವಿಸ್ ರಸ್ತೆಯನ್ನು ಮೆಟ್ರೋ ಸ್ಟೇಷನ್ ಕಾಮಗಾರಿಗಾಗಿ (Metro Station Work) ಮುಂದಿನ 45 ದಿನಗಳ ಕಾಲ ಬಂದ್ ಮಾಡಲಾಗುತ್ತಿದ್ದು, ಓಆರ್‌ಆರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಔಟರ್ ರಿಂಗ್ ರೋಡ್‌ನಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಲು ಸಂಚಾರಿ ಪೊಲೀಸರು (Traffic Police)  ಮನವಿ ಮಾಡಿದ್ದಾರೆ.

ಹೌದು, ಹೆಚ್.ಎಸ್.ಆರ್ ಲೇಔಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಹೊರವರ್ತುಲ ರಸ್ತೆಯ 9ನೇ ಮುಖ್ಯರಸ್ತೆ ಜಂಕ್ಷನ್‌ನಿಂದ 5ನೇ ಮುಖ್ಯ ರಸ್ತೆ ಜಂಕ್ಷನ್ ವರೆಗೆ ಸರ್ವಿಸ್ ರಸ್ತೆಯಲ್ಲಿ ಮೇಟ್ರೋ ಸ್ಟೇಷನ್ ಕಾಮಗಾರಿ ಪ್ರಗತಿಯಲ್ಲಿದ್ದು, ಅ.6ರಿಂದ 45 ದಿನಗಳ ಕಾಲ ಕಾಮಗಾರಿ ನಡೆಯಲಿದೆ. 9ನೇ ಮುಖ್ಯ ರಸ್ತೆ ಜಂಕ್ಷನ್ ನಿಂದ 5ನೇ ಮುಖ್ಯ ರಸ್ತೆ ಜಂಕ್ಷನ್‌ವರೆಗಿನ ಹೊರವರ್ತುಲ ರಸ್ತೆ ಸರ್ವಿಸ್ ರಸ್ತೆಯನ್ನು ಕಾಮಗಾರಿಗಾಗಿ ಉಪಯೋಗಿಸಿಕೊಳ್ಳಲಾಗುತ್ತದೆ. ಇದನ್ನೂ ಓದಿ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

ಕಾಮಗಾರಿ ಮುಗಿಯುವವರೆಗೆ ಇಬ್ಬಲೂರ್ ಕಡೆಯಿಂದ ಬಂದು ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು 14ನೇ ಮುಖ್ಯ ರಸ್ತೆ ಫೈಓವರ್ ಮೂಲಕ ಮುಖ್ಯರಸ್ತೆಯಲ್ಲಿಯೇ 5ನೇ ಮುಖ್ಯರಸ್ತೆ ಜಂಕ್ಷನ್‌ಗೆ ಸಾಗಿ ಅಥವಾ ಇತರ ಹೆಚ್.ಎಸ್.ಆರ್. ಲೇಔಟ್ ಒಳಭಾಗದ ರಸ್ತೆಗಳ ಮೂಲಕ ಸಾಗಿ ಸಿಲ್ಕ್ ಬೋರ್ಡ್ ಹಾಗು ಹೊಸೂರು ಮುಖ್ಯರಸ್ತೆಯಲ್ಲಿ ಸಂಚರಿಸಬೇಕು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬೀಗ; ಸರ್ಕಾರದಿಂದ ಸುದೀಪ್ ಟಾರ್ಗೆಟ್: ಛಲವಾದಿ ನಾರಾಯಣಸ್ವಾಮಿ

Share This Article