ಬೆಂಗಳೂರು | ವೈಟ್ ಟಾಪಿಂಗ್ ಕಾಮಗಾರಿ – 23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಜ್‌ಕುಮಾರ್ ರಸ್ತೆ ಬಂದ್

Public TV
2 Min Read

– ಮುಂದಿನ ಮೂರು ತಿಂಗಳು ಟ್ರಾಫಿಕ್ ಕಿರಿಕಿರಿ ತಪ್ಪಿದ್ದಲ್ಲ!

ಬೆಂಗಳೂರು: ಮೆಜೆಸ್ಟಿಕ್‌ನಿಂದ (Majestic) ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌ಗಳು ತೆರಳಬೇಕು ಅಂದರೆ ರಾಜ್‌ಕುಮಾರ್ ರಸ್ತೆ (Dr Rajkumar Road) ಮುಖಾಂತರ ಹೋಗಬೇಕು. ಈ ರಸ್ತೆಯಿಂದ ತುಮಕೂರು ರಸ್ತೆಗೆ ಕನೆಕ್ಟ್ ಆಗಿ ತೆರಳಬಹುದಿತ್ತು‌. ಆದರೆ ರಾಜ್‌ಕುಮಾರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ (Whitetopping) ನಡೆಯುತ್ತಿದೆ. ಇದರಿಂದ ಸಂಚಾರ ನಿರ್ಬಂಧ ಮಾಡಲಾಗಿದೆ.

ಮೆಜೆಸ್ಟಿಕ್‌ನಿಂದ ಲೂಲುಮಾಲ್ ಜಂಕ್ಷನ್ ಮಾರ್ಗವಾಗಿ ನವರಂಗ್ ಸಿಗ್ನಲ್‌ಗೆ ಬರಲು ದ್ವಿಚಕ್ರ ವಾಹನ, ಕಾರುಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಬಸ್‌ಗಳು ಲೂಲುಮಾಲ್ ಜಂಕ್ಷನ್ ಬಳಿ ಇರುವ ಅಂಡರ್‌‌ ಪಾಸ್ ಮುಖಾಂತರ ಬಾಷಂ ಸರ್ಕಲ್‌ಗೆ ತೆರಳಿ ವೆಸ್ಟಾಫ್ ಕಾರ್ಡ್ ರೋಡ್ ಮೂಲಕ ತುಮಕೂರು ರಸ್ತೆಗೆ ತೆರಳುಬಹುದು. ವಾಹನ ಸವಾರರಿಗೆ ಬದಲಿ ಮಾರ್ಗ ತಿಳಿಯದೇ ಲೂಲು ಜಂಕ್ಷನ್ ಬಳಿ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತಿದೆ. ಇದರಿಂದಾಗಿ ಟ್ರಾಫಿಕ್ ಪೊಲೀಸರು ವಾಹಗಳನ್ನು ಖುದ್ದು ಸ್ಥಳದಲ್ಲಿ ನಿಂತು ಮಾರ್ಗ ಬದಲಾವಣೆ ಮಾಡುತ್ತಿದ್ದಾರೆ. ಮೆಜೆಸ್ಟಿಕ್‌ನಿಂದ ತುಮಕೂರು ಕಡೆಗೆ ಮತ್ತು ರಾಜಾಜಿನಗರದ ಕಡೆಗೆ ಬರುವ ವಾಹನಗಳಿಗೆ ಟ್ರಾಫಿಕ್ ಪೊಲೀಸರು ಬದಲಿ ಮಾರ್ಗ ಸೂಚಿಸಿದ್ದಾರೆ. ಇದನ್ನೂ ಓದಿ: ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ – ಎಸ್.ನಾರಾಯಣ್, ಪತ್ನಿ, ಪುತ್ರನಿಗೆ ನೋಟಿಸ್

ಮೆಜೆಸ್ಟಿಕ್‌ – ತುಮಕೂರು: ಖಾಸಗಿ ವಾಹನಗಳು, ಬಸ್‌ಗಳು ನೇರವಾಗಿ ಲೂಲುಮಾಲ್ ಬಳಿಯ ರಾಜಾಜಿನಗರ ಪ್ರವೇಶದ ಅಂಡರ್ ಪಾಸ್ ಮೂಲಕ ಭಾಷಂ ಸರ್ಕಲ್, ದೋಬಿಘಾಟ್ ವಾರಿಯರ್ ಬೇಕರಿ ಎಡ ತಿರುವು ಪಡೆದು ವೆಸ್ಟಾಫ್ ಕಾರ್ಡ್ ರಸ್ತೆ ಜೆಎಸ್‌ಎಸ್ ಜಂಕ್ಷನ್ ಕಡೆಗೆ ಸಾಗಿ ತುಮಕೂರು ರಸ್ತೆಗೆ ತೆರಳಬಹುದು

ಮೆಜೆಸ್ಟಿಕ್ – ರಾಜಾಜಿನಗರ: ಮೆಜೆಸ್ಟಿಕ್‌ನಿಂದ ಬರುವ ದ್ವಿಚಕ್ರ ವಾಹನ, ಕಾರುಗಳು ನವರಂಗ್ ಸಿಗ್ನಲ್ ಬಳಿ ಎಡತಿರುವು ಪಡೆದು 19ನೇ ಮುಖ್ಯ ರಸ್ತೆ , ಮೋದಿ ಸೇತುವೆ ಬಲ ತಿರುವು ಪಡೆದು ಸಾಗಬಹುದು.

ರಾಜ್ ಕುಮಾರ್ ರಸ್ತೆಯಲ್ಲಿ ಸಂಚಾರ ಬಂದ್‌ನಿಂದ ದೊಡ್ಡ ಪ್ರಮಾಣದ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನ ಸವಾರರು, ಪ್ರಯಾಣಿಕರು ಟ್ರಾಫಿಕ್ ಜಾಮ್‌ನಿಂದ ಹೈರಾಣಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ಕಾಗದ ಉತ್ಪನ್ನಗಳ GST ದರ ಗೊಂದಲ – ವಿದ್ಯಾರ್ಥಿಗಳ ನೋಟ್‌ಬುಕ್ ಬೆಲೆ ಏರಿಕೆ ಆತಂಕ!

Share This Article