ಬೆಂಗಳೂರಿನಲ್ಲಿ ಜಿ20 ಶೃಂಗಸಭೆ – ರೆಸಾರ್ಟ್‌ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

Public TV
1 Min Read

ಬೆಂಗಳೂರು: ಭಾರತದ ಅಧ್ಯಕ್ಷತೆಯಲ್ಲಿ ಒಂದು ನೆಲ ಒಂದು ಕುಟುಂಬ, ಒಂದು ಭವಿಷ್ಯ ಎಂಬ ಪರಿಕಲ್ಪನೆಯ ಅಡಿಯಲ್ಲಿ ಮಂಗಳವಾರದಿಂದ ಬೆಂಗಳೂರಿನಲ್ಲಿ ಜಿ 20(G20) ಶೃಂಗಸಭೆ ಆರಂಭವಾಗಲಿದೆ.

ಬೆಂಗಳೂರು ಹೊರವಲಯದಲ್ಲಿರುವ ದೇವನಹಳ್ಳಿಯ ಪ್ರೆಸ್ಟಿಜ್ ಗಾಲ್ಪ್ ಶೈರ್ ಜೆಡಬ್ಯ್ಲೂ ಮ್ಯಾರಿಯಟ್ ಹೋಟೆಲ್‌ನಲ್ಲಿ(JW Marriott Bengaluru Prestige Golfshire Resort & Spa) ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ‌.

ಮೂರು ದಿನಗಳ ಕಾಲ ಜಾಗತಿಕ ಮಟ್ಟದ ಸವಾಲುಗಳು, ಅಂತರಾಷ್ಟ್ರೀಯ ಮಟ್ಟದ ಹಣಕಾಸು ಪುನರುಜ್ಜೀವನಗೊಳಿಸುವ ಬಗ್ಗೆ ಚರ್ಚೆಗಳು ನಡೆಯಲಿವೆ. ಯುರೋಪಿಯನ್‌ ಯೂನಿಯನ್‌ ದೇಶಗಳಿಂದ ಗಣ್ಯರು ಇಂದು ಆಗಮಿಸುತ್ತಿದ್ದಾರೆ. ಹಲವು ದೇಶಗಳ ಹಣಕಾಸು ಕಾರ್ಯದರ್ಶಿ ಗಳು ಸೇರಿದಂತೆ ಹಲವು ಗಣ್ಯರು ಜಿ20 ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಡಿ.17 ರವರೆಗೂ 2 ಸಭೆಗಳು ಹೋಟೆಲ್‌ನಲ್ಲಿ ನಡೆಯಲಿವೆ.  ಇದನ್ನೂ ಓದಿ: 6 ಮದುವೆ, 54 ಮಕ್ಕಳಿಗೆ ತಂದೆಯಾದ ಪಾಕಿಸ್ತಾನಿ ವ್ಯಕ್ತಿ ಸಾವು

ಈ ಶೃಂಗಸಭೆಗೆ ಆಗಮಿಸುವ ಅತಿಥಿಗಳ ಭದ್ರತೆಗೆ 6 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಸುಮಾರು 700 ಮಂದಿ ಪೊಲೀಸರನ್ನು ಭದ್ರತೆಗೆ‌ ನಿಯೋಜಿಸಲಾಗಿದೆ. ಕೇಂದ್ರ ಹಣಕಾಸು ಹಾಗೂ ಬ್ಯಾಂಕ್‌ಗಳ ಪ್ರತಿನಿಧಿಗಳ ಸಭೆ ನಡೆಯಲಿದ್ದು, ಡಿ.16 ಹಾಗೂ 17 ರಂದು ನಿಯಾಮವಳಿ ರೂಪಿಸುವ ಕಾರ್ಯಕಾರಿ ಸಭೆ ನಡೆಯಲಿದೆ.

ಹಣಕಾಸು ವ್ಯವಸ್ಥೆಯಲ್ಲಿ ಕೇಂದ್ರಿಯ ಬ್ಯಾಂಕುಗಳ ಪಾತ್ರದ ಬಗ್ಗೆ ವಿಚಾರ ಸಂಕೀರಣ ಕೂಡ ನಡೆಯಲಿದೆ. ಇದರ ನೇತೃತ್ವವನ್ನ ವಾಣಿಜ್ಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್ ಮತ್ತು ಆರ್‌ಬಿಐ ಡೆಪ್ಯೂಟಿ ಗವರ್ನರ್ ಮೈಕೆಲ್ ವಹಿಸಲಿದ್ದಾರೆ ಎನ್ನಲಾಗಿದೆ. ಶೃಂಗಸಭೆ ನಡೆಯುವ ರೆಸಾರ್ಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *