ಶಕ್ತಿದೇವತೆ ಹಾಸನಾಂಬೆ ದರ್ಶನಕ್ಕೆ ಜನಸಾಗರ – ಬೆಂಗಳೂರು To ಹಾಸನ ಬಸ್ ಸಂಚಾರ ಸ್ಥಗಿತ

Public TV
1 Min Read

– ಈಗಾಗಲೇ 50 ಸಾವಿರ ಟಿಕೆಟ್‌ ಬುಕ್; ಜನ ನಿಯಂತ್ರಿಸಲು ಬುಕಿಂಗ್‌ ಕೂಡ ಬಂದ್
– ಬೆಂಗಳೂರಿಂದ ಗಂಟೆಗೆ ಕೇವಲ‌ 2 ಬಸ್‌ ‌

ಬೆಂಗಳೂರು: ಹಾಸನಾಂಬೆ (Hasanamba) ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಧಾವಿಸುತ್ತಿದ್ದರು. ವಾರಾಂತ್ಯ ಹಾಗೂ ದೀಪಾವಳಿ ರಜೆ ಕಾರಣದಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು-ಹಾಸನ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಜನಸಂಖ್ಯೆ ನಿಯಂತ್ರಿಸಲು ಟಿಕೆಟ್‌ ಬುಕಿಂಗ್‌ (Bus Ticket Booking) ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತ
ಹಾಸನಾಂಬೆ ದೇಗುಲ ಹಾಗೂ ಸುತ್ತ ಮುತ್ತ ಬಾರಿ ಜನಸ್ತೋಮ ನೆರೆದಿದೆ. ಭಕ್ತರು ಹಾಸನಾಂಬೆ ದರ್ಶನಕ್ಕೆ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಇತ್ತ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಭಕ್ತರನ್ನು ನಿಯಂತ್ರಸಲು ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ತಾತ್ಕಾಲಿಕವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾತ್ಕಾಲಿಕವಾಗಿ ಬಸ್ ಸಂಚಾರ ಸ್ಥಗಿತಗೊಂಡಿದೆ.

ಬುಕಿಂಗ್‌ ಕೂಡ ಸ್ಥಗಿತ
ಇನ್ನೂ ಈಗಾಗಲೇ ಸಹಸ್ತ್ರಾರು ಭಕ್ತರು ಹಾಸನಾಂಬೆ ದರ್ಶನ ಪಡೆಯಲು 50 ಸಾವಿರ ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದಾರೆ. ಹೀಗಾಗಿ, ತಾತ್ಕಾಲಿಕವಾಗಿ ಟಿಕೆಟ್‌ ಬುಕಿಂಗ್‌ ಕೂಡ ಸ್ಥಗಿತಗೊಳಿಸಲಾಗಿದೆ.

ಕೀಲೋಮೀಟರ್ ಉದ್ದದ ಸಾಲು
ಹಾಸನಾಂಬೆ ದರ್ಶನಕ್ಕೆ ಭಕ್ತರ ಸಾಗರ ಹೆಚ್ಚಾಗಿರುವ ಕಾರಣ ದರ್ಶನಕ್ಕೆ ಕಿಲೋಮೀಟರ್‌ಗಟ್ಟಲೇ ಸಾಲು ದೊಡ್ಡದಾಗಿದೆ. 1,000 ರೂ. ಹಾಗೂ 300 ರೂ. ಟಿಕೆಟ್‌ ಪಡೆದ ಭಕ್ತರು ಪ್ರತ್ಯೇಕ ಸಾಲುಗಳಲ್ಲಿ ಬಂದು ದರ್ಶನ ಪಡೆಯುತ್ತಿದ್ದಾರೆ. ಎರಡೂ ಸಾಲುಗಳು ಕಿಲೋಮೀಟರ್‌ಗೂ ಅಧಿಕವಾಗಿದೆ.

Share This Article