ಜುಲೈ 27ರಂದು ಬಂದ್ ಆಗುತ್ತಾ ಬೆಂಗಳೂರು?

Public TV
2 Min Read

ಬೆಂಗಳೂರು: ಇದೇ 27ಕ್ಕೆ ಆಟೋ, ಟ್ಯಾಕ್ಸಿ, ಕ್ಯಾಬ್ ಹಾಗೂ ಖಾಸಗಿ ಬಸ್ ಸಂಘಟನೆಗಳು ಬಂದ್‍ಗೆ (Bengaluru Bandh) ಕರೆಕೊಟ್ಟಿವೆ. ಸರ್ಕಾರದ ಶಕ್ತಿಯೋಜನೆಯಿಂದ (Shakthi Scheme) ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳು ಆರೋಪಿಸಿವೆ. ಹೀಗಾಗಿ ಸರ್ಕಾರ ಸಂಘಟನೆಗಳ ಮನವೊಲಿಕೆಗೆ ಮುಂದಾಗಿದೆ.

ಸರ್ಕಾರದ ಶಕ್ತಿಯೋಜನೆ ಅದ್ಭುತವಾಗಿ ಯಶಸ್ಸು ಕಂಡಿದೆ. ಇದರಿಂದ ಪ್ರತಿಕೂಲ ಪರಿಣಾಮ ಎದುರಿಸುತ್ತಿರುವ ಆಟೋ (Auto), ಕ್ಯಾಬ್ (Cab) ಹಾಗೂ ಖಾಸಗಿ ಬಸ್ (Private Bus) ಮಾಲೀಕರು ಇದೀಗ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಹಿನ್ನೆಲೆ ಜುಲೈ 27ಕ್ಕೆ 23 ಸಂಘಟನೆಗಳು ಸೇರಿದ ಖಾಸಗಿ ಸಾರಿಗೆ ಒಕ್ಕೂಟ ಸಾಮೂಹಿಕವಾಗಿ ಬಂದ್ ಆಚರಸಿ ಸರ್ಕಾರಕ್ಕೆ ಪ್ರತಿರೋಧ ಒಡ್ಡಲು ಮುಂದಾಗಿದೆ. ಜುಲೈ 27ಕ್ಕೆ ಬೆಂಗಳೂರಲ್ಲಿ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಗಳನ್ನು ರಸ್ತೆಗೆ ಇಳಿಸದೆ ಮುಷ್ಕರ ಮಾಡಲು ಮುಂದಾಗಿತ್ತು. ಆದರೆ ಇದರ ಮಹತ್ವ ಅರಿತುಕೊಂಡಿರುವ ಸರ್ಕಾರ ಖಾಸಗಿ ಸಾರಿಗೆ ಒಕ್ಕೂಟಗಳ ಮನವೊಲಿಕೆಗೆ ಮುಂದಾಗಿದೆ.

ಖಾಸಗಿ ಸಾರಿಗೆ ಇಲಾಖೆ ಜುಲೈ 27ಕ್ಕೆ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆ ಇಂದು ಸಾರಿಗೆ ಇಲಾಖೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಬಂದ್‍ಗೆ ಕರೆ ಹಾಗೂ ಬೆಂಬಲ ಕೊಟ್ಟಿರುವ ಸಂಘಟನೆಗಳ ಆಹವಾಲು ಸ್ವೀಕರಿಸಲಿದ್ದು, ಆಗುತ್ತಿರುವ ಅನಾನೂಕಲಗಳನ್ನು ಆಲಿಸಲಿದ್ದಾರೆ.ಒಂದು ವೇಳೆ ಇಂದಿನ ಸಭೆ ಯಶಸ್ವಿಯಾದರೆ ಬಂದ್ ವಾಪಾಸ್ ಪಡೆಯುವ ಸಂಭವವಿದೆ.

`ಬಂದ್’ಗೆ ಮನವೊಲಿಸುತ್ತಾ ಸರ್ಕಾರ..?: ಖಾಸಗಿ ಚಾಲಕ, ಮಾಲೀಕರ ಹಿತದೃಷ್ಟಿಯಿಂದ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬಹುದು. ಆಟೋ, ಕ್ಯಾಬ್ ಚಾಲಕರಿಗೆ ಮಾಸಿಕ 10 ಸಾವಿರ ಪರಿಹಾರ ಧನ ನೀಡುವ ಸಾಧ್ಯತೆಗಳಿವೆ. ರ್ಯಾಪಿಡೋ ಸೇವೆಯನ್ನು ಹಿಮಾಚಲ ಪ್ರದೇಶ, ದೆಹಲಿ, ಅಸ್ಸಾಂನಂತೆ ಸಂಪೂರ್ಣ ನಿಷೇಧ ಮಾಡಬಹುದು. ಟೂರಿಸ್ಟ್ ಹಾಗೂ ಕಾಂಟ್ರಾಕ್ಟ್ ಬಸ್‍ಗಳ ಮೇಲಿನ ರಸ್ತೆ ತೆರಿಗೆ ಕಡಿತಗೊಳಿಸಬಹುದು. ಎಲ್ಲೋ ಬೋರ್ಡ್ ಗಾಡಿಗಳ ಜೀವಿತಾವಧಿ ತೆರಿಗೆ ಕಡಿತಗೊಳಿಸಬಹುದು.

ಹೀಗೆ ಇಂದಿನ ಸಭೆಯಲ್ಲಿ ಹಲವು ರೀತಿಯ ಬೇಡಿಕೆಯನ್ನು ಸಂಘಟನೆಗಳು ಸರ್ಕಾರದ ಮುಂದಿಡಲಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಕಾರ್ಮಿಕರ ಬದುಕಿಗೆ ಪೆಟ್ಟು ಬಿದ್ದಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಸರ್ಕಾರ ಯಾವ ರೀತಿ ಸ್ಪಂದಿಸುತ್ತೋ ಕಾದು ನೋಡಬೇಕಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್