ತಬ್ಲಿಘಿಗಳ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ: ಸುನೀಲ್ ಕುಮಾರ್

Public TV
1 Min Read

ಬೆಂಗಳೂರು: ತಬ್ಲಿಘಿಗಳ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ ಎಂದು ಉಡುಪಿ ಜಿಲ್ಲೆಯ ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

ತಬ್ಲಿಘಿಗಳ ವರ್ತನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಇದೆ ನನ್ನ ಪ್ರಥಮ ಆದ್ಯತೆ ಎಂದು ಸುನೀಲ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ವಿಚಾರವಾಗಿ ನೆನ್ನೆ ಸುಧೀರ್ಘ ಪೋಸ್ಟ್ ಹಾಕಿದ್ದ ಸಂಸದ ಅನಂತ್‍ಕುಮಾರ್ ಹೆಗ್ಡೆಯವರು, ಈ ಲೇಖನದಲ್ಲಿ ಅನಂತ್‍ಕುಮಾರ್ ಅವರು ತಬ್ಲಿಘಿ ಇತಿಹಾಸವೇನು? ಭಾರತ ಮೂಲದ ಇಸ್ಲಾಂ ಧರ್ಮ ಪ್ರಚಾರದ ಸಂಸ್ಥೆ ವಿಶ್ವವ್ಯಾಪಿ ಬೆಳೆದಿದ್ದು ಹೇಗೆ? ತಬ್ಲಿಘಿಗೂ ಉಗ್ರಸಂಘನೆಗೂ ಹೇಗೆ ನಂಟು? ಧರ್ಮ ಪ್ರಚಾರದಕ್ಕೆ ತಬ್ಲಿಘಿ ಜಮಾತ್ ಸದಸ್ಯರನ್ನು ಹೇಗೆ ಬಳಸಿಕೊಂಡಿತು? ರಷ್ಯಾ- ಅಫ್ಘಾನಿಸ್ತಾನ್‍ನ ವಿವಾದವೇನು? ಕೊರೊನಾ ವೈರಸ್ ಹಾಗೂ ತಬ್ಲಿಘಿ ಜಮಾತ್ ನಂಟಿನ ಬಗ್ಗೆ ಉಲ್ಲೇಖಿಸಿದ್ದರು. ಇದನ್ನು ಓದಿ: ತಬ್ಲಿಘಿ ಜಮಾತ್ ಉಗ್ರ ಸಂಘಟನೆ, ದೇಶಾದ್ಯಂತ ಸೋಂಕು ಹರಡಿಸಿದ್ದಾರೆ -ಅನಂತ್‍ಕುಮಾರ್ ಹೆಗ್ಡೆ

ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಯತ್ನಾಳ್, ಕಾನೂನು ಕ್ರಮದ ಎಚ್ಚರಿಕೆ ಕೊಡಬೇಕಾದದ್ದು ಕೊರೊನಾ ಹಬ್ಬಿಸುವ ಮತಾಂಧರಿಗೆ. ಅವರನ್ನು ಸಮರ್ಥಿಸುವ ಮಾನವೀಯತೆ ಇರದ ಧಾರ್ಮಿಕ ರಾಜಕೀಯ ನಾಯಕರಿಗೆ ಹೊರತು ದೇಶಭಕ್ತ ಸಮುದಾಯಗಳಿಗೆ ಅಲ್ಲ. ತಬ್ಲಿಘಿ ಜಮಾತ್ ಜಿಹಾದಿಗಳಿಗೆ ಅಂತಿಮ ಎಚ್ಚರಿಕೆ ಕೊಡಿ, ಸಹಕರಿಸದಿದ್ದರೆ ಗುಂಡಿಕ್ಕಿ. ನಿಮಗೆ ಇದು ಪ್ರಚೋದನೆ ಎನಿಸಿದರೆ ನನ್ನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯತ್ನಾಳ್ ಬರೆದುಕೊಂಡಿದ್ದರು.

ಸಿಎಂ ಹೇಳಿದ್ದೇನು?
“ಕೊರೊನಾ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನೇ ಸಂಪೂರ್ಣ ಲಾಕ್‍ಡೌನ್ ಮಾಡಿದ್ದಾರೆ. ಮುಸ್ಲಿಂ ಸಮಾಜವೂ ಪ್ರಧಾನಿ ಮೋದಿ ಅವರ ಬೆಂಬಲಕ್ಕೆ ನಿಂತಿದೆ. ಕಲವೊಂದು ಅಹಿತಕರ ಘಟನೆ ನಡೆದಿದೆ. ಆ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಅವುಗಳನ್ನೇ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಈ ಸಂದರ್ಭದಲ್ಲಿ ಕೋಮು ಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *