Bengaluru | ದೇವಿಯ ತೇರು ಎಳೆಯುತ್ತಿದ್ದ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ

1 Min Read

– ಅನ್ಯ ಕೋಮಿನವರು ಕಲ್ಲು ಎಸೆದ ಆರೋಪ
– ಓಂ ಶಕ್ತಿ ಮಾಲಾಧಾರಿಗಳಿಂದ ಪ್ರತಿಭಟನೆ

ಬೆಂಗಳೂರು: ದೇವಿಯ ತೇರು ಎಳೆಯುತ್ತಿರುವ ವೇಳೆ ತೇರಿನ ಮೇಲೆ ಹಾಗೂ ಓಂ ಶಕ್ತಿ ಮಾಲಾಧಾರಿಗಳ (Om Shakti Maladharis) ಮೇಲೆ ಕಲ್ಲು ಎಸೆದಿರುವ ಘಟನೆ ಬೆಂಗಳೂರಿನ ಜೆಜೆಆರ್ ನಗರದ (JJR Nagar) ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ನಡೆದಿದೆ.

ಮೂವರಿಗೆ ಕಲ್ಲು ಬಿದ್ದಿರುವ ಬಗ್ಗೆ ಆರೋಪ ಕೇಳಿಬಂದಿದೆ. ಕಲ್ಲು ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಮಗು, ಯುವತಿ, ವಯಸ್ಕ ಮಹಿಳೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಕಿಡಿಗೇಡಿಗಳನ್ನ ಬಂಧಿಸುವಂತೆ ಬಿಗಿಪಟ್ಟು ಹಿಡಿಯಲಾಗಿದೆ. ಇದನ್ನೂ ಓದಿ: ಹಿಂದೂ ವ್ಯಕ್ತಿಯ ಹತ್ಯೆ ಕೇಸ್‌ – ಬಾಂಗ್ಲಾ ಪೊಲೀಸರಿಂದ ಮೂವರು ಆರೋಪಿಗಳ ಬಂಧನ

ತೇರಿನ ಮೇಲೆ ಅನ್ಯ ಕೋಮಿನವರಿಂದ ಕಲ್ಲು ಎಸೆದ ಆರೋಪ ಹೊರಿಸಲಾಗಿದೆ. ಓಂ ಶಕ್ತಿ ಮಾಲೆ ಧರಿಸಿದ್ದ ಮಗುವಿಗೆ ಕಲ್ಲೇಟು ಬಿದ್ದಿದೆ. ಘಟನೆ ಬಳಿಕ ಓಂ ಶಕ್ತಿ ಮಾಲಾಧಾರಿಗಳು ಜೆಜೆಆರ್ ನಗರ ಠಾಣೆಯ ಮುಂದೆ ಜಮಾಯಿಸಿ ಕ್ರಮಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕಲ್ಲು ಎಸೆದ ಕಿಡಿಗೇಡಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಬೆಂಕಿಯಿಂದ ಹೊಲದಲ್ಲೇ ಸುಟ್ಟು ಭಸ್ಮವಾದ ರಾಗಿ ಹುಲ್ಲು

Share This Article