ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ತಾಯಿಯನ್ನೇ ಕೊಲೆಗೈದ ಟೆಕ್ಕಿ

Public TV
2 Min Read

ಬೆಂಗಳೂರು: ಶೀಲ ಶಂಕಿಸಿ ಸಾಫ್ಟ್‍ವೇರ್ ಎಂಜಿನಿಯರ್ ಪತ್ನಿಯ ಮೇಲೆ ಹಲ್ಲೆ ಮಾಡಿ ಸಂಧಾನಕ್ಕೆ ಬಂದಿದ್ದ ಪತ್ನಿಯ ಪ್ರಿಯಕರನ ತಾಯಿಯನ್ನೇ ಕೊಲೆಗೈದ ಘಟನೆ ನಗರದ ಕೊತ್ತನೂರು ಠಾಣಾ ವ್ಯಾಪ್ತಿಯ ಭೈರತಿಯಲ್ಲಿ ನಡೆದಿದೆ.

ಭೈರತಿ ನಿವಾಸಿ ಸಾವಿತ್ರಮ್ಮ ಕೊಲೆಯಾದ ಮಹಿಳೆ. ಆನಂದ್ ಕೊಲೆಗೈದ ಸಾಫ್ಟ್‍ವೇರ್ ಎಂಜಿನಿಯರ್ ಪತಿ. ಆರೋಪಿಯನ್ನು ಕೊತ್ತನೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ: ವಿವಾಹಿತ ಮಹಿಳೆ ಜೊತೆ ಪಿಎಸ್‍ಐ ಅಕ್ರಮ ಸಂಬಂಧ – ಮನನೊಂದ ಮಹಿಳೆಯ ಪತಿ ಆತ್ಮಹತ್ಯೆಗೆ ಯತ್ನ

ಏನಿದು ಪ್ರಕರಣ?:
ಹೆಚ್‍ಪಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಆನಂದ್ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಸ್ನೇಹಾ, ಭರತ್ ಎಂಬವನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗಿತ್ತು. ಇದರಿಂದಾಗಿ ಮನನೊಂದಿದ್ದ ಆನಂದ್, ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಪತ್ನಿ ಸ್ನೇಹಾ ಜೊತೆಗೆ ಜಗಳಕ್ಕೆ ಇಳಿದಿದ್ದ.

ಜಗಳದ ವಿಚಾರ ತಿಳಿದ ಸ್ನೇಹಾ ಪ್ರಿಯಕರ ಭರತ್, ಆತನ ತಂದೆ ಸಂಗಣ್ಣ ಮತ್ತು ತಾಯಿ ಸಾವಿತ್ರಮ್ಮ ಆನಂದ್ ಮನೆಗೆ ಬಂದು ಸಂಧಾನಕ್ಕೆ ಯತ್ನಿಸಿದ್ದರು. ಆದರೆ ಆನಂದ್ ಏಕಾಏಕಿ ಭರತ್ ಮೇಲೆ ಬ್ಯಾಟ್ ನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಕೆರಳಿದ ಭರತ್ ಪೋಷಕರು, ಆನಂದ್ ಮೇಲೆ ತಿರುಗಿಬಿದ್ದಿದ್ದಾರೆ.

ಎರಡೂ ಕುಟುಂಬಗಳ ನಡುವೆ ಮಾರಾಮಾರಿ ಹೊಡೆದಾಟವಾಗಿದ್ದು, ಮನೆಯಲ್ಲಿದ್ದ ಚಾಕು ಹಿಡಿದು ಬಂದ ಆನಂದ್, ಭರತ್ ಹಾಗೂ ಆತನ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಭರತ್ ತಾಯಿ ಸಾವಿತ್ರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭರತ್ ಮತ್ತು ತಂದೆ ಸಂಗಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು, ಘಟನೆ ನಡೆದ ಅರ್ಧ ಗಂಟೆಯಲ್ಲಿಯೇ ಆರೋಪಿ ಆನಂದ್‍ನನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆಗೆ ಒಳಪಡಿಸಿದಾಗ, ಸ್ನೇಹಾ ಹಾಗೂ ಭರತ್ ಮಧ್ಯೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಕೃತ್ಯ ಎಸಗಿದ್ದಾನೆ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *