ಹುಡುಗಿಯರ ಕಡೆ ನೋಡಲ್ಲ, ಆಂಟಿಯರು ಸಿಕ್ರೆ ಬಿಡಲ್ಲ – ಬೆಂಗ್ಳೂರಿನಲ್ಲೊಬ್ಬ ಕಾಮುಕ ಟೆಕ್ಕಿ ಅರೆಸ್ಟ್

Public TV
2 Min Read

ಬೆಂಗಳೂರು: ಮದುವೆ (Marriage) ಆಗಿದ್ದ ಚಂದದ ಆಂಟಿಯರೇ ಈತನ ಟಾರ್ಗೆಟ್‌, ಹುಡುಗಿಯರ ಕಡೆಗೆ ತಿರುಗಿ ಕೂಡ ನೋಡುತ್ತಿರಲಿಲ್ಲ, ಮದುವೆಯಾದ ಮಹಿಳೆಯರು ಸಿಕ್ಕರೆ ಬಿಡೋ ಪ್ರಶ್ನೇನೇ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ (Social Media) ಗಾಳ ಹಾಕ್ತಿದ್ದ, ಖೆಡ್ಡಗೆ ಬೀಳಿಸಿ ಮಾನ ಹರಾಜು ಹಾಕುವುದಾಗಿ ಬೆದರಿಕೆ ಕೂಡ ಹಾಕ್ತಿದ್ದ. ಅಂತಹ ಒಬ್ಬ ಕಾಮುಕ ಪೊಲೀಸರ (Police) ಅತಿಥಿಯಾಗಿದ್ದಾನೆ.

ಈಗಂತೂ ಕೆಲವು ಮಹಿಳೆಯರು (Womens) ಗಂಡ-ಮಕ್ಕಳನ್ನ ಮರೆಮಾಚಿ ಇನ್ನೂ ಮದುವೆನೇ ಆಗಿಲ್ಲ ಅನ್ನೋ ರೇಂಜ್‌ಗೆ ಚಂದದ ಫೋಟೋಗಳನ್ನ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ಚಂದದ ಆಂಟಿಯರನ್ನೇ ಟಾರ್ಗೆಟ್‌ ಮಾಡಿ ಖೆಡ್ಡಗೆ ಬೀಳಿಸಿ, ಮರ್ಯಾದೆ ಹರಾಜು ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದ ಟೆಕ್ಕಿಯೊಬ್ಬ (Techie) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಮಗಳ ತಂಟೆಗೆ ಬರಬೇಡಿ ಎಂದಿದ್ದಕ್ಕೆ ಚಾಕುವಿನಿಂದ ಇರಿದು ಹತ್ಯೆ

ಹೌದು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಟೆಕ್ಕಿ ಫೈ‌ಸಲ್‌ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದ ಫೈಸಲ್ ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಓಪನ್ ಮಾಡುತ್ತಿದ್ದ. ಈ ನಕಲಿ ಖಾತೆ ಮೂಲಕ ಮದುವೆ ಆಗಿರೋ ಚೆಂದದ ಆಂಟಿಯರನ್ನ ಟಾರ್ಗೆಟ್‌ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ. ಈತನ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಮೇಲೆ ದಿನ ರಾತ್ರಿಯಾದ್ರೆ ಸಾಕು ಹಾಯ್, ಗುಡ್ ಮಾರ್ನಿಂಗ್, ಗುಡ್ ನೈಟ್ ಮಸೇಜ್‌ಗಳಿಂದ ಶುರುವಾಗಿ ಮಹಿಳೆಯರಿಗೆ ಸ್ವಾತಂತ್ರ್ಯ, ಗಂಡಂದಿರ ದೌರ್ಜನ್ಯ ಅಂತಾ ಉದ್ದೂದ್ದ ಭಾಷಣ ಬಿಗಿದು ನೈಸಾಗಿ ಖೆಡ್ಡಕ್ಕೆ ಬೀಳಿಸಿಕೊಳ್ತಿದ್ದ. ಅದು ಎಷ್ಟರಮಟ್ಟಿಗೆ ಅಂದ್ರೆ ತನ್ನ ಖಾಸಗಿ ಜಾಗಕ್ಕೆ ಕರೆಸಿಕೊಂಡು ಅವರ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿ ಅದನ್ನ ಯಾರಿಗೂ ಗೊತ್ತಾಗದ ಹಾಗೇ ವೀಡಿಯೋ ಕೂಡ ಮಾಡಿಕೊಳ್ಳುತ್ತಿದ್ದ.

ಇದಾದ ಕೆಲ ದಿನಗಳ ನಂತರ ಆ ಆಂಟಿಯರಿಗೆ ಕರೆ ಮಾಡ್ತಿದ್ದ ಟೆಕ್ಕಿ ಫೈಸಲ್, ಪದೇ ಪದೇ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ, ಆಮೇಲೆ ಲಕ್ಷ ಲಕ್ಷ ಹಣ ಕೇಳೋಕೆ ಶುರುಮಾಡ್ತಿದ್ದ. ಗಾಬರಿಯಾದ ಆಂಟಿಯರು, ನಾನ್ ಹಣ ಕೊಡಲ್ಲ, ಬರೋದು ಇಲ್ಲ ಅಂತಾ ಅಂದ್ರೆ ದೈಹಿಕ ಸಂಪರ್ಕದ ವೀಡಿಯೋ ಕಳಿಸಿ ನಿನ್ನ ಗಂಡನಿಗೆ ಕಳಿಸ್ತೀನಿ. ಸೋಷಿಯಲ್ ಮೀಡಿಯಾದಲ್ಲಿ ಮಾನ ಹರಾಜು ಹಾಕ್ತೀನಿ ಅಂತಾ ಬೆದರಿಕೆ ಹಾಕ್ತಿದ್ದ. ಇದನ್ನೂ ಓದಿ: ಬೆಳಗಾವಿ ಸಚಿವರ ಮಧ್ಯೆ ಶೀತಲ ಸಮರ – ಮಕ್ಕಳಿಗೆ ಎಂಪಿ ಟಿಕೆಟ್ ಕೊಡಿಸಲು ಹೆಬ್ಬಾಳ್ಕರ್-ಜಾರಕಿಹೊಳಿ ಫೈಟ್

ಇಂತಹ ಪ್ರಕರಣದಿಂದ ಬೇಸತ್ತ ಹೆಚ್‌ಎಸ್‌ಆರ್ ಬಡಾವಣೆಯ ಮಹಿಳೆಯೊಬ್ಬರು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಮಹಿಳೆಯಿಂದ ಮಸೇಜ್ ಮಾಡಿ ಲೊಕೆಷನ್‌ ಹೇಳೋಕೆ ಹೇಳಿದ್ದಾರೆ. ಆಗ ಕಾಮುಕ ಚೆನ್ನೈನ ಒಂದು ಲಾಡ್ಜ್‌ಗೆ ಬರೋಕೆ ಹೇಳಿದ್ದಾನೆ. ಆ ಮಹಿಳೆ ಬರುತ್ತಾಳೆ ಎಂದು ಕಾದು ಕುಳಿತಿದ್ದ ಫೈಸಲ್‌ನನ್ನು ಬೆಂಗಳೂರು ಪೊಲೀಸರು ಎಡೆಮುರಿ ಕಟ್ಟಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರಿಗೆ ಈತ ಈ ಹಿಂದೆಯೂ ಇದೇ ರೀತಿಯ ಕೃತ್ಯಗಳನ್ನ ಎಸೆಗಿರುವ ಬಗ್ಗೆ ಮೊಬೈಲ್‌ನಲ್ಲಿ ಒಂದಷ್ಟು ಸಾಕ್ಷಿಗಳು ಸಿಕ್ಕಿವೆ. ತನಿಖೆ ಮುಂದುವರಿದಿದೆ.

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್