ಬೆಂಗಳೂರು: ದುಬೈ (Dubai) ಪ್ಯಾಸೆಂಜರ್ ಬ್ಯಾಗ್‌ಗೆ 3.5 ಕೆಜಿ ಚಿನ್ನದ ಬಿಸ್ಕೆಟ್ ಅಂಟಿಸಿ, ಗೋಲ್ಡ್ ಸ್ಮಗ್ಲರ್ ಪರಾರಿಯಾಗಿರುವ ಘಟನೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ನಡೆದಿದೆ.
ಬ್ಯಾಗ್ ಮಾಲೀಕ ತನ್ನ ಟ್ರ್ಯಾಲಿಯನ್ನು ಎಳೆದುಕೊಂಡು ಹೋಗುವಾಗ ಚಿನ್ನ ಬ್ಯಾಗ್ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಮಾಲೀಕ ಚಿನ್ನದ ಬ್ಯಾಗ್‌ನ್ನು ಡಿಆರ್‌ಐ ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿದ್ದಾನೆ. ಅಧಿಕಾರಿಗಳು ಬ್ಯಾಗ್ ಪರಿಶೀಲನೆ ಮಾಡಿದಾಗ 3.5 ಕೆಜಿ ಚಿನ್ನದ ಬಿಸ್ಕೆಟ್ ಇರುವುದು ಪತ್ತೆಯಾಗಿದೆ.ಇದನ್ನೂ ಓದಿ: ಬಿಹಾರ ಮಾತ್ರವಲ್ಲ ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಮುಂದಾದ ಚುನಾವಣಾ ಆಯೋಗ
ಅಧಿಕಾರಿಗಳು ಮಾಲೀಕನ ವಿಚಾರಣೆ ನಡೆಸಿದಾಗ ಚಿನ್ನಕ್ಕೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಬಹಿರಂಗ ಆಗಿದೆ. ಬಳಿಕ ಸ್ಮಗ್ಲರ್, ಪ್ರಯಾಣಿಕನ ಬ್ಯಾಗ್‌ಗೆ ಚಿನ್ನ ಅಂಟಿಸಿ ಪರಾರಿಯಾಗಿರುವುದು ತಿಳಿದುಬಂದಿದೆ.
ಸದ್ಯ ಡಿಆರ್‌ಐ ಅಧಿಕಾರಿಗಳು (DRI Officers) ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸ್ಮಗ್ಲರ್‌ಗಾಗಿ ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ:ಸದ್ಯಕ್ಕೆ ಮುಡಾ ಸೈಟ್ ವಾಪಸ್ ಕೇಳಲ್ಲ: ಸಿಎಂ ಪುತ್ರ ಯತೀಂದ್ರ ಸ್ಪಷ್ಟನೆ