ಬೆಂಗಳೂರು ಉಗ್ರರ ಪ್ರಯೋಗಾಲಯ ಆಗದಿರಲಿ: ಸರ್ಕಾರಕ್ಕೆ ಯತ್ನಾಳ್‌ ಎಚ್ಚರಿಕೆ

Public TV
2 Min Read

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎನ್‌ಐಎ (NIA) ದಾಳಿ ವಿಚಾರವಾಗಿ ರಾಜ್ಯ ಸರ್ಕಾರವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಬೆಂಗಳೂರು ಉಗ್ರರ ಲ್ಯಾಬೊರೇಟರಿ ಹಾಗೂ ಸಮನ್ವಯ ಕೇಂದ್ರವಾಗದಿರಲಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 7 ಕೆಜಿ ಸೋಡಿಯಂ ನೈಟ್ರೇಟ್ ಸೀಜ್ – ಎನ್‍ಐಎಯಿಂದ 8 ಮಂದಿ ಅರೆಸ್ಟ್

ಟ್ವೀಟ್‌ನಲ್ಲಿ ಏನಿದೆ?
ಸುಲ್ತಾನ ಪಾಳ್ಯ, ಆರ್.ಟಿ.ನಗರ, ಶಿವಾಜಿನಗರದಲ್ಲಿ ಭಯೋತ್ಪಾದಕರ ಸ್ಲೀಪರ್ ಸೆಲ್ ಬೇರೂರಿವುದು ಹಾಗೂ ಇವರ ಬಾಂಬ್ ‘ತಯಾರಿಕಾ ಫ್ಯಾಕ್ಟ್ರಿ’ ಹಾಗೂ ‘ಸಮನ್ವಯ ಭವನವನ್ನು’ ಯಾವುದೇ ಭಯವಿಲ್ಲದೆ ನಿರ್ವಹಿಸುತ್ತಿರುವುದು ಪ್ರಸ್ತುತ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯ ಪ್ರತಿಫಲದಿಂದಲೇ.

ಅತಿಯಾದ ಓಲೈಕೆ ರಾಜಕಾರಣದಿಂದ ದೇಶದ ಸಮಗ್ರತೆ, ಐಕ್ಯತೆ, ಸಾರ್ವಭೌಮತ್ವಕ್ಕೆ ಸರ್ಕಾರವೇ ಧಕ್ಕೆ ತರುತ್ತಿರುವುದಂತೂ ನಿಶ್ಚಿತ. ಪ್ರಜೆಗಳ ಸುರಕ್ಷತೆಯನ್ನು ಕಾಯಬೇಕಾದ ಸರ್ಕಾರ ಈ ರೀತಿಯಾದ ಮಟ್ಟಕ್ಕೆ ಕುಸಿದಿರುವುದು ಶೋಚನೀಯ. ಇದನ್ನೂ ಓದಿ: ಐಸಿಸ್ ಉಗ್ರರ ನಂಟು ಪ್ರಕರಣ – ಬೆಂಗ್ಳೂರು ಸೇರಿದಂತೆ 4 ರಾಜ್ಯಗಳ 19 ಕಡೆ NIA ದಾಳಿ

ಗೃಹ ಸಚಿವರು ಉಡಾಫೆ ಉತ್ತರಗಳನ್ನು ಕೊಡುವುದನ್ನು ಬಿಟ್ಟು ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಬೆಂಗಳೂರು ಉಗ್ರರ ಲ್ಯಾಬೊರೇಟರಿ ಹಾಗೂ ಸಮನ್ವಯ ಕೇಂದ್ರವಾಗದಿರಲಿ. ನುಸುಳುಕೋರರರನ್ನು, ಉಗ್ರರನ್ನು, ಅವರಿಗೆ ರಕ್ಷಣೆ ನೀಡುವ ಅವರ ಪೋಷಕರನ್ನು ಸೇರಿದಂತೆ ಅವರ ಎಲ್ಲ ಬೆಂಬಲಿಗರನ್ನು ಜೈಲಿಗೆ ಹಾಕಿ ಎಂದು ಯತ್ನಾಳ್‌ ಒತ್ತಾಯಿಸಿದ್ದಾರೆ.

Share This Article