ಬೆಳ್ಳಂಬೆಳಗ್ಗೆ ಬೆಂಗ್ಳೂರಲ್ಲಿ ಅಗ್ನಿ ಅವಘಡ

Public TV
0 Min Read

ಬೆಂಗಳೂರು: ಬೆಳ್ಳಂಬೆಳಗ್ಗೆಯೇ ಸಿಲಿಕಾನ್ ಸಿಟಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರಿನ ನಾಗವಾರ ಮುಖ್ಯ ರಸ್ತೆಯ ವಿದ್ಯಸಾಗರ ಬಸ್ ನಿಲ್ದಾಣದಲ್ಲಿರೋ ಪೀಠೋಪಕರಣ ಮಳಿಗೆಗೆ ಬೆಂಕಿ ಹೊತ್ತಿಕೊಂಡಿದೆ.

ಒಂದು ಅಂಗಡಿಗೆ ಬಿದ್ದ ಬೆಂಕಿಯ ಜ್ವಾಲೆ ಅಕ್ಕ-ಪಕ್ಕ ಇರುವ ಅಂಗಡಿಗಳಿಗೂ ತಗುಲಿದ್ದು, ಭಾರೀ ಪ್ರಮಾಣದಲ್ಲಿ ಬೆಂಕಿಯ ಜ್ವಾಲೆ ಹೆಚ್ಚಾಗಿದೆ. ಬೆಂಕಿ ನಂದಿಸಲು 6ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಪೀಠೋಪಕರಣ ಮತ್ತು ಗುಜರಿ ಅಂಗಡಿಗಳ ಸಾಲು ಆ ಸ್ಥಳದಲ್ಲಿದ್ದು ನಾಲ್ಕಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿಯ ಜ್ವಾಲೆ ತಗುಲಿದೆ.

Share This Article
Leave a Comment

Leave a Reply

Your email address will not be published. Required fields are marked *