ಕೆರೆ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗಿನ ಅರ್ಪಣೆ

Public TV
1 Min Read

ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಅರಮನೆನಗರ ವಾರ್ಡ್ ಸದಾಶಿವನಗರದ ಬಳಿ ಇರುವ ಪುರಾತನ ಕೆರೆ ಸ್ಯಾಂಕಿ ಕೆರೆ ತುಂಬಿ ಕೋಡಿ ಹರಿದ ಕಾರಣದಿಂದ ಸ್ಥಳೀಯ ಶಾಸಕರು, ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ್ ಅವರು ವೇದ, ಆಗಮ ಪಂಡಿತರ ಸಮ್ಮುಖದಲ್ಲಿ ಕಳಸ ಪೂಜೆ ಮತ್ತು ಕೆರೆಗೆ ಬಾಗಿನ ಅರ್ಪಣೆ ಮಾಡಿದರು.

ಅರಮನೆನಗರ ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಸುಮಂಗಲ ಕೇಶವ್ ಮತ್ತು ಬಿಜೆಪಿ ಉತ್ತರ ಜಿಲ್ಲಾ ವಿಶೇಷ ಆಹ್ವಾನಿತರಾದ ಕೇಶವ್ ಐತಾಳ್ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

ಬಳಿಕ ಅಶ್ವಥ್ ನಾರಾಯಣ್ ಮಾತನಾಡಿ, ಸತತ ಎರಡನೇ ವರ್ಷ ನಮ್ಮ ಮಲ್ಲೇಶ್ವರದ ಸ್ಯಾಂಕಿ ಕೆರೆ ತುಂಬಿ ಬಂದಿದ್ದು ಕೋಡಿ ಹರಿದ ಶುಭ ಸಂಕೇತವಾಗಿ ಇಂದು ಬಾಗಿನ ಅರ್ಪಿಸಲಾಯಿತು. ಕೆರೆಯ ಜಲಾನಯನ ಪ್ರದೇಶವಾದ ಸದಾಶಿವನಗರ, ಅರಣ್ಯ ಭವನ ಸೇರಿದಂತೆ ವಿವಿಧ ಭಾಗಗಳಲ್ಲಿ ಸುರಿದ ಮಳೆನೀರು ವ್ಯರ್ಥವಾಗದೆ ಸಮರ್ಪಕ ನಿರ್ವಹಣೆ ಮಾಡಿರುವ ಫಲವಾಗಿ ಇದು ಸಾಧ್ಯವಾಗಿದೆ ಎಂದರು.

ಆ ಭಾಗಗಳಿಂದ ನೀರು ಹರಿದುಬರಲು ಇದ್ದ ಕಾಲುವೆಗಳು ಹೂಳು, ಕಸದಿಂದ ಮುಚ್ಚಿ ಹೋಗಿದ್ದವು. ಅವುಗಳನ್ನು ಸರಿಮಾಡಿ ಕೆರೆ ಕಡೆಗೆ ನೀರು ಹರಿಸುವ ಹಾಗೆ ಮಾಡಿದ ಸಮರ್ಪಕವಾದ ವ್ಯವಸ್ಥೆಯಿಂದ ಸತತ ಎರಡನೇ ವರ್ಷ ಸ್ಯಾಂಕಿ ಕೆರೆ ತುಂಬಿಕೊಂಡಿದೆ. ಜಲ ಸಂಪನ್ಮೂಲದ ಸಮರ್ಪಕ ಬಳಕೆ ಮಾಡೋಣ ಎಂದು ಹೇಳಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

Share This Article
Leave a Comment

Leave a Reply

Your email address will not be published. Required fields are marked *