ಮತ್ತೆ ಒಂದಾದ ಮಂಜು – ಲೀಲಾ; ಹೊಸ ಜೀವನ ಆರಂಭಿಸಿದ ಜೋಡಿ

2 Min Read

– ಧರ್ಮಸ್ಥಳದಲ್ಲಿ ತಾಳಿ ಕಟ್ಟಿ ಹೊಸ ಜೀವನ ನಡೆಸಲು ನಿರ್ಧಾರ

ಬೆಂಗಳೂರು: ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಗಂಡನಿಂದ ದೂರ ಆಗಿದ್ದ ಮಹಿಳೆ ಲೀಲಾ ಮತ್ತೆ ಪತಿ ಮಂಜುನಾಥ್‌ ಕೈ ಹಿಡಿದಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಪ್ರಿಯಕರ (Lover) ಸಂತುನ ಬಿಟ್ಟು, ಗಂಡ ಮಂಜುನಾಥ್‌ ಜೊತೆ ಒಂದಾಗಿ ಮನೆಗೆ ಬಂದಿದ್ದಾರೆ. ಬಂಗಾರಿ ಸಿಕ್ಕ ಖುಷಿಯಲ್ಲಿ ಮಂಜು ಲೀಲಾಗೆ ಮುತ್ತು ಕೊಟ್ಟು ಚೆನ್ನಾಗಿ ನೋಡ್ಕೋತೀನಿ ಅಂತ ಪ್ರಾಮಿಸ್ ಮಾಡಿದ್ದಾರೆ. ಲೀಲಾ ರೀ ಎಂಟ್ರಿಯಿಂದ ಫುಲ್ ಖುಷಿಯಾಗಿರುವ ಸಂತು ಹೊಸ ಜೀವನ ನಡೆಸ್ತಿದ್ದಾರೆ.

ಧರ್ಮಸ್ಥಳದಲ್ಲಿ (Dharmasthala) ಲೀಲಾಗೆ ಮತ್ತೊಮ್ಮೆ ತಾಳಿ ಕಟ್ಟಿ ಜೀವನ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂತು, ಮಂಜು, ಲೀಲಾ ಟ್ರಯಾಂಗಲ್‌ ಲವ್‌ಸ್ಟೋರಿ ಸಂಚಲನ ಸೃಷ್ಟಿಸಿತ್ತು. ಯಾವ್ದೇ ಕಾರಣಕ್ಕೂ ನಿನ್ ಜೊತೆ ಬಾಳಲ್ಲ ಎಂದಿದ್ದ ಲೀಲಾ, ಕೊನೆಗೂ ಗಂಡ ಮಂಜುನ ಗೋಳಾಟಕ್ಕೆ ಕರಗಿ ಕೈ ಹಿಡಿದಿದ್ದಾರೆ. ಇದನ್ನೂ ಓದಿ: ಮಕ್ಕಳನ್ನು ನೋಡಲು ಹೋದ ನನ್ಮೇಲೆ ಸಂತು, ಲೀಲಾ ಹಲ್ಲೆ ನಡೆಸಿದ್ರು: ಪತ್ನಿ ಆರೋಪ ಸುಳ್ಳು ಎಂದ ಮಂಜ

ಪ್ರಿಯಕರ ಸಂತು ಮೇಲೆ ಮಂಜು ಹಲ್ಲೆ ನಡೆಸಿ, ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದು ಹೊಸ ಆಟೋ ಖರೀದಿಸಿ ಬದುಕು ಶುರು ಮಾಡಿದ್ದ. ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಮತ್ತೆ ಒಂದಾಗಿದ್ದು, ಮಂಜು ತನ್ನ ಕುಟುಂಬದವರನ್ನ ನೆನೆದು ಕಣ್ಣೀರು ಹಾಕಿದ್ರು. ಲೀಲಾ ಕೂಡ ನಾವಿಬ್ರು ಹಳೆಯದನ್ನ ಮೆರೆತು ಹೊಸ ಜೀವನ ಶುರು ಮಾಡ್ತಿವಿ ಎಂದು ಹೇಳಿದ್ರು.

ಬನ್ನೇರುಘಟ್ಟದ ಬಾಡಿಗೆ ಮನೆಯಲ್ಲಿ ಈ ಜೋಡಿ ಖುಷಿಯ ಕ್ಷಣಗಳನ್ನ ಕಳೆಯುತ್ತಿದೆ. ಲೀಲಾ ಬಂಗಾರಿ ಬಂದ್ಬಿಡು ಅಂತ ಗೊಗೆರೆಯುತ್ತಿದ್ದ ಮಂಜುನ ಸಂಕಟಕ್ಕೆ ಕೊನೆಗೂ ಸಮಾಧಾನ ಸಿಕ್ಕಿದೆ. ಹಾದಿಬೀದಿ ರಂಪಾಟ ಆಗಿದ್ದ ಮಂಜು ಲೀಲಾ ಕುಟುಂಬ ವಿಚಾರ ಇದೀಗಾ ಸುಖಾಂತ್ಯ ಕಂಡಿದೆ. ಇಬ್ರು ಇನ್ಮುಂದೆ ಚೆನ್ನಾಗಿರಲಿ. ಇದನ್ನೂ ಓದಿ: ಮೂರು ಮಕ್ಕಳ ತಾಯಿ ಲೀಲಾಳ ಲವ್ವರ್‌ಗೆ ಬಿಯರ್‌ ಬಾಟಲ್‌ನಿಂದ ಹೊಡೆದ ಪತಿ ಮಂಜುನಾಥ್‌

leela and lover santu

ಆ ದಿನ ಏನಾಗಿತ್ತು?
ಬಸವನಪುರದಲ್ಲಿ (Basavanapura) ವಾಸವಿದ್ದ ಲೀಲಾವತಿ, ಮಂಜುನಾಥ್ ದಂಪತಿ 11 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು. ಮಂಜುನಾಥ್‌ ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡ್ತಿದ್ದ. ಕಳೆದ 2 ವರ್ಷಗಳ ಹಿಂದೆ ಲೀಲಾವತಿಗೆ ಪ್ರಿಯಕರ ಸಂತೋಷ್‌ನ ಪರಿಚಯವಾಗಿತ್ತು. ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ಅಕ್ರಮ ಸಂಬಂಧ ಬೆಳೆದಿತ್ತು. ಸಾಕಷ್ಟು ಬಾರಿ ಮಂಜುನಾಥ್‌ ಇದನ್ನ ಪ್ರಶ್ನೆ ಮಾಡಿದ್ದ. ಆದರೂ ಬುದ್ಧಿ ಕಲಿಯದ ಲೀಲಾವತಿ ಪ್ರಿಯಕರ ಸಂತು ಜೊತೆ ಎಸ್ಕೇಪ್‌ ಆಗಿದ್ದಳು.

ಈ ಕುರಿತು ಪತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಬಳಿಕ ಠಾಣೆಗೆ ಹಾಜರಾದ ಲೀಲಾವತಿ ತನಗೆ ಪ್ರಿಯಕರನೇ ಬೇಕೆಂದು ತಾಳಿ ಕಿತ್ತಿಟ್ಟು, ಹೋಗಿದ್ದಳು.

Share This Article