ಬೆಂಗಳೂರು: ಐರಾವತ ಬಸ್ ಹರಿದು ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣಕ್ಕಿಡಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬಾಣಮಾಕನಹಳ್ಳಿ ಗೇಟ್ ಬಳಿ ಸಂಭವಿಸಿದೆ.
ಕೆ.ಆರ್.ಪುರಂನ ಎ.ನಾರಾಯಣಪುರದ ನಿವಾಸಿಗಳಾದ ನಾಗೇಶ್ (23) ಹಾಗೂ ತೇಜಸ್ (22) ಮೃತ ದುರ್ದೈವಿಗಳು. ಕೆಟಿಎಂ ಬೈಕ್‍ನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ನಾಗೇಶ್ ಹಾಗೂ ತೇಜಸ್ ಕೆಟಿಎಂ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಾಣಮಾಕನಹಳ್ಳಿ ಗೇಟ್ ಬಳಿ ಬೈಕ್ ಏಕಾಏಕಿ ಸ್ಕಿಡ್ ಆಗಿ ಬೀದ್ದಿದೆ. ಆದರೆ ಹಿಂದೆ ಬರುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿದ ಐರಾವತ ಬಸ್, ಓರ್ವ ಸವಾರನ ತಲೆ ಹಾಗೂ ಮತ್ತೊಬ್ಬನ ಸೊಂಟದ ಮೇಲೆ ಹರಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ನಂದಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸವಾರರ ಮೃತದೇಹಗಳನ್ನು ಮರಣೋತ್ತರ ಪರಿಕ್ಷೇ ಕಳುಹಿಸಿದ್ದಾರೆ.