ಓರ್ವ ಕಳ್ಳ, ಐವರು ದರೋಡೆಕೋರರ ಬಂಧನ: 19 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತು ವಶ

Public TV
1 Min Read

ಚಿಕ್ಕಬಳ್ಳಾಪುರ: ಕಾರು, ದ್ವಿಚಕ್ರ ವಾಹನಗಳಲ್ಲಿ ಒಂಟಿಯಾಗಿ ಬರುವವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಸುಲಿಗೆ ಮಾಡುತ್ತಿದ್ದ ಐವರು ಕುಖ್ಯಾತ ದರೋಡೆಕೋರರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಅನೇಕಲ್‍ನ ವಿಜಯ್ ಕುಮಾರ್, ಮಡಕಶಿರಾದ ಹರೀಶ್, ಶಿರಾದ ರೇಣುಕಾರಾಜ, ಆಂಧ್ರ ಪ್ರದೇಶದ ಪಲಮನೇರಿನ ವಿಜಿ, ತ್ಯಾಮಗೊಂಡ್ಲುವಿನ ವೆಂಕಟೇಶ್ ಬಂಧಿತ ಆರೋಪಿಗಳು. ಬಂಧಿತರು ಈ ಹಿಂದೆಯೇ ವಿವಿಧ ಪ್ರಕರಣದಲ್ಲಿ ಸಿಕ್ಕಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ಆರು ಜನರು ಜೈಲಿನಲ್ಲಿ ಪರಸ್ಪರ ಪರಿಚಯವಾಗಿದ್ದು, ಅಲ್ಲಿಂದ ಹೊರಬಂದ ನಂತರ ಮತ್ತೆ ದರೋಡೆ, ಸರಗಳ್ಳತನ, ವಾಹನಗಳ ಕಳವು ಸೇರಿದಂತೆ ಚಾಕು ತೋರಿಸಿ ಹೆದರಿಸುವ ಕೆಲಸ ಮಾಡುತ್ತಿದ್ದರು.

ಬಂಧಿತರಿಂದ 26,50,000 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಕಾರ್ಯಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದರೋಡೆಕೋರರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಜಿಲ್ಲಾ ಎಸ್‍ಪಿ ಶಿವಕುಮಾರ್ ಬಹುಮಾನ ಘೋಷಿಸಿದರು.

ಲಾರಿ ಕಳ್ಳನ ಬಂಧನ:
ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಕದಿಯುತ್ತಿದ್ದ ಕಳ್ಳನನ್ನು ವಿಶ್ವನಾಥಪುರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದ ಜಾಕೀರ್ ಬಂಧಿತ ಆರೋಪಿಯಾಗಿದ್ದು, ಈತನು ವಿಶ್ವನಾಥಪುರ ಗ್ರಾಮದ ವಿನಯ್ ಎಂಬವರ ಮನೆ ಮುಂದೆ ನಿಲ್ಲಿಸಿದ ಈಚರ್ ಲಾರಿಯನ್ನು ಕಳ್ಳತನ ಮಾಡಿದ್ದ. ಆತನಿಂದ 16,50,000 ರೂ. ಮೌಲ್ಯದ ಲಾರಿಯನ್ನು ಪೊಲೀಸರು ವಶ ಪಡಿಸಿಕೊಂಡಿಸಿಕೊಂಡಿದ್ದಾರೆ. ಈ ಹಿಂದಯೇ ಜಾಕೀರ್ ವಿರುದ್ಧ ಕಳ್ಳತನ ಅನೇಕ ಪ್ರಕರಣಗಳು ದಾಖಲಾಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *