7 ಕೋಟಿ ದರೋಡೆ ಕೇಸ್‌ – ಕೆಜಿ ಹಳ್ಳಿ ನಿವಾಸಿ ಆಂಧ್ರದ ವೇಲೂರಲ್ಲಿ ವಶಕ್ಕೆ

1 Min Read

– ತಿರುಪತಿ ಲಾಡ್ಜ್‌ಗಳಲ್ಲಿ ತೀವ್ರ ಶೋಧ

ಬೆಂಗಳೂರು: ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ (Bengaluru Robbery) ಸಂಬಂಧಿಸಿದಂತೆ ಕೆಜಿ ಹಳ್ಳಿ (KG Halli) ನಿವಾಸಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಬಂಧಿತ ಆರೋಪಿ ವ್ಯಾಗನರ್‌ನಲ್ಲಿ ತಮಿಳುನಾಡಿಗೆ ಹೋಗಿದ್ದ. ಬಳಿಕ ಕುಪ್ಪಂನಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದ. ಈತನನ್ನು ಆಂಧ್ರದ ವೇಲೂರು ಬಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನೂ ದರೋಡೆ ಮಾಡಿದ ಹಣದಲ್ಲಿ ನವೀನ್ ಎಂಬಾತನ ಮನೆಯಲ್ಲಿ ಐದೂವರೆ ಕೋಟಿ ಹಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 7 ಕೋಟಿ ದರೋಡೆಯಾಗಿದ್ದರೂ ಸಿಎಂಎಸ್‌ಗೆ ಇಲ್ಲ ಚಿಂತೆ!

ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪತಿಯ ಹಲವು ಲಾಡ್ಜ್ ಗಳಲ್ಲಿ ಪೊಲೀಸರ ತಂಡ ತಪಾಸಣೆ ನಡೆಸುತ್ತಿದೆ.

ಡೈರಿ ಸರ್ಕಲ್‌ನಲ್ಲಿ ನ.19ರ ಮಟ-ಮಟ ಮಧ್ಯಾಹ್ನವೇ ದೊಡ್ಡ ದರೋಡೆ ನಡೆದಿತ್ತು. ಸಿಕ್ಕಾಪಟ್ಟೆ ಜನ, ಟ್ರಾಫಿಕ್ ಇರುವ ಏರಿಯಾದಲ್ಲಿ ಬರೋಬ್ಬರಿ 7 ಕೋಟಿ 11 ಲಕ್ಷ ರೂ. ಹಣವನ್ನ ದೋಚಿ ದರೋಡೆಕೋರರು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಬೆನ್ನುಹತ್ತಿರುವ ಪೊಲೀಸರು ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಸೇರಿ ಇಬ್ಬರನ್ನು ಬಂಧಿಸಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ ಕೇಸ್ – ಚೆನ್ನೈನಲ್ಲಿ ಆರೋಪಿಗಳನ್ನು ಹಿಡಿದು 6.3 ಕೋಟಿ ವಶಕ್ಕೆ

Share This Article