ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ : ಪರಮೇಶ್ವರ್‌ ಅಧಿಕೃತ ಘೋಷಣೆ

By
1 Min Read

ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ (Towing)  ಶುರುವಾಗಲಿದೆ. ಗೃಹ ಸಚಿವ ಪರಮೇಶ್ವರ್‌ ಅವರು ಅಧಿಕೃತವಾಗಿ ಟೋಯಿಂಗ್‌ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಬಾಡಿಗೆ ಟೋಯಿಂಗ್ ವಾಹನ ಬಳಸದೇ ಇಲಾಖೆಯ ವಾಹನ ಬಳಸಿಕೊಂಡು ಟೋಯಿಂಗ್ ನಡೆಸಲು ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.

ಟೋಯಿಂಗ್‌ ಆರಂಭದ ಬಗ್ಗೆ ಕೆಲ ದಿನಗಳಿಂದಲೇ ಚರ್ಚೆ ನಡೆಯುತ್ತಿತ್ತು. ಈಗ ಸರ್ಕಾರವೇ ಅಧಿಕೃತವಾಗಿ ಟೋಯಿಂಗ್‌ ಆರಂಭವಾಗುವ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಸಾಲು ಸಾಲು ಉಚ್ಛಾಟನೆ, ತಾಂತ್ರಿಕವಾಗಿ ಬಿಜೆಪಿ ಬಲಾಬಲ ಕುಸಿತ

ಏನಿದು ಟೋಯಿಂಗ್‌?
ಪಾರ್ಕಿಂಗ್‌ ಅಲ್ಲದ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೆ ಟೋಯಿಂಗ್‌ ವಾಹನ ಅವುಗಳನ್ನು ಎತ್ತಿಕೊಂಡು ಹೋಗಿ ಸಂಚಾರ ಠಾಣೆಯ ಮುಂದೆ ಇಡುತ್ತದೆ. ಮಾಲೀಕರು ಠಾಣೆಗೆ ತೆರಳಿ ದಂಡ ಕಟ್ಟಿ ವಾಹನಗಳನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೊಮ್ಮಾಯಿ ಸರ್ಕಾರ 2022ರಲ್ಲಿ ಟೋಯಿಂಗ್‌ ರದ್ದು ಮಾಡಿತ್ತು.

Share This Article