ಬಿಸಿಲಿನ ಬೇಗೆಗೆ ಬೆಂಗಳೂರು ತತ್ತರ – 8 ವಲಯಗಳಲ್ಲಿ ದಾಖಲೆಯ ತಾಪಮಾನ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ದಾಖಲೆಯ ತಾಪಮಾನ ಏರಿಕೆಯಾಗಿದೆ. ಮೂರು ವರ್ಷಗಳ ದಾಖಲೆ ಸರಿಗಟ್ಟಿದೆ. ಬರೋಬ್ಬರಿ 36 ರಿಂದ 37 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗಿದೆ. ಬಿಸಿಲಿನ ಬೇಗೆಗೆ ಬೆಂಗಳೂರು ಜನ ತತ್ತರಿಸಿ ಹೋಗಿದ್ದಾರೆ. ಒಟ್ಟು ಬೆಂಗಳೂರಿನಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಆದರೆ ಬೆಂಗಳೂರಿನ ಎಂಟು ವಲಯಗಳಲ್ಲಿ ತಾಪಮಾನ ದಾಖಲೆ ಬರೆದಿದೆ.

ಎಲ್ಲಿ ಎಷ್ಟು ತಾಪಮಾನ?
ಆರ್‌ಆರ್ ನಗರ – 38.60 ಡಿಗ್ರಿ ಸೆಲ್ಸಿಯಸ್
ಬೆಂಗಳೂರು ಪೂರ್ವ- 37 ಡಿಗ್ರಿ ಸೆಲ್ಸಿಯಸ್
ಯಲಹಂಕ – 34.90 ಡಿಗ್ರಿ ಸೆಲ್ಸಿಯಸ್
ಬೆಂಗಳೂರು ದಕ್ಷಿಣ – 35.90 ಡಿಗ್ರಿ ಸೆಲ್ಸಿಯಸ್
ದಾಸರಹಳ್ಳಿ – 36.60 ಡಿಗ್ರಿ ಸೆಲ್ಸಿಯಸ್
ಬೊಮ್ಮನಹಳ್ಳಿ – 36.70%
ಮಹಾದೇವಪುರ – 34.80 ಡಿಗ್ರಿ ಸೆಲ್ಸಿಯಸ್
ಪಶ್ಚಿಮ ವಲಯ – 35.40 ಡಿಗ್ರಿ ಸೆಲ್ಸಿಯಸ್

weather

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಅಂತರ್ಜಲ ಕುಸಿದಿದೆ. ಮರ ಗಿಡಗಳು ಕಡಿಮೆ ಇದೆಯೋ ಅಲ್ಲಿ ತಾಪಮಾನ (Temperature) ಏರಿಕೆ ಆಗಿದೆ. ಎಲ್ಲೆಲ್ಲಿ ಮರ ಗಿಡಗಳು ಇವೆ ಆ ಭಾಗದಲ್ಲಿ ತಾಪಮಾನ ಕಡಿಮೆ ಇದೆ. ಗಾಳಿಯ ವೇಗ ಕೂಡ ಕಡಿಮೆ ಇದೆ. ಜನರು ಕೂಡ ಪರಿಸರ ಸಂರಕ್ಷಿಸುವ ಕೆಲಸ ಮಾಡಬೇಕು. ಬಿಸಿಲಿನಿಂದ ಎಚ್ಚರ ವಹಿಸಬೇಕು. ಇದನ್ನೂ ಓದಿ: ತೀವ್ರ ಬರ – ಯಾದಗಿರಿ ಜಿಲ್ಲೆಯ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಒಟ್ಟಾರೆ ಬೆಂಗಳೂರಿನ ತಾಪಮಾನ ಅಲ್ಲದೇ ವಲಯಗಳಲ್ಲೂ ತಾಪಮಾನ ಏರಿಕೆ ಆಗಿದೆ. ಹೀಗಾಗಿ ಜನರು ಕೂಡ ಎಚ್ಚರಿಕೆ ವಹಿಸಬೇಕಿದೆ. ಸಮೃದ್ಧಿ ಮಳೆ ಆದರೆ ತಾಪಮಾನ ತಗ್ಗಲಿದೆ. ವರುಣ ದೇವ ಯಾವಾಗ ಕರುಣಿಸಲಿದ್ದಾನೋ ಕಾದು ನೋಡಬೇಕಿದೆ. ಇದನ್ನೂ ಓದಿ: ಬಂದ ದಾರಿಗಿಲ್ಲ ಸುಂಕ – ದೆಹಲಿಯಲ್ಲಿ ಈಶ್ವರಪ್ಪ ಭೇಟಿಯಾಗದ ಅಮಿತ್ ಶಾ

Share This Article