ಹೊಸೂರು ರಸ್ತೆಯಲ್ಲಿ ‘ಸ್ವಿಮ್ಮಿಂಗ್ ಪೂಲ್’ – ವಾಹನ ಸಂಚಾರ ಬಂದ್

By
1 Min Read

– ಕೆಆರ್ ಮಾರ್ಕೆಟ್ ಪಾರ್ಕಿಂಗ್ ಲಾಟ್‌ಗೆ ನುಗ್ಗಿದ ನೀರು

ಬೆಂಗಳೂರು: ಬೆಂಗಳೂರಿನಲ್ಲಿ(Bengaluru) ಭಾರೀ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ಮಳೆ ನೀರು ರಸ್ತೆಗೆ ಹರಿದು ಬರುತ್ತಿರುವ ಹಿನ್ನೆಲೆ ಹೊಸೂರು ರಸ್ತೆಯಲ್ಲಿ(Hosuru Road) ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಸಿಲ್ಕ್ ಬೋರ್ಡ್ ಜಂಕ್ಷನ್‌ನಿದ ರೂಪೇನ ಅಗ್ರಹಾರವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಸಂಚಾರ ಪೊಲೀಸರು ಎಲಿವೆಟೇಡ್ ಫ್ಲೈಓವರ್ ಕೂಡ ಬಂದ್ ಮಾಡಿದ್ದಾರೆ. ಪರ್ಯಾಯ ಮಾರ್ಗ ಬಳಸುವಂತೆ ನಗರ ಸಂಚಾರ ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: Belagavi | 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಅಪ್ರಾಪ್ತ ಸೇರಿ ಇಬ್ಬರ ಬಂಧನ

ಪ್ರಾಣಿಗಳ ರೋದನೆ
ಸಾಯಿ ಲೇಔಟ್‌ನ(Sai Layout) ಜಲಾವೃತ ಪ್ರದೇಶದಿಂದ ಆಚೆ ಬರಲಾಗದೇ ಶ್ವಾನಗಳ ಪರದಾಡುತ್ತಿವೆ. ನೀರಿನಿಂದ ಆಚೆ ಬರಲಾಗದೇ, ಅತ್ತ ಊಟವೂ ಸಿಗದೇ ಮೂಕ ಪ್ರಾಣಿಗಳು ರೋದಿಸುತ್ತಿವೆ. ಜಲಾವೃತ ಪ್ರದೇಶದಲ್ಲಿ ಐದಾರು ನಾಯಿಗಳು ಸಿಲುಕಿಕೊಂಡು ಒದ್ದಾಡುತ್ತಿವೆ. ಇದನ್ನೂ ಓದಿ: ನೀರಿನ ಬಾಟಲಿಗೆ 1 ರೂ. ಜಿಎಸ್‌ಟಿ – ರೆಸ್ಟೋರೆಂಟ್‌ಗೆ 8 ಸಾವಿರ ದಂಡ

ಇನ್ನು ಕೆಆರ್ ಮಾರುಕಟ್ಟೆ(KR Market) ಪಾರ್ಕಿಂಗ್ ಲಾಟ್‌ಗೂ ನೀರು ನುಗ್ಗಿದ್ದು, 50ಕ್ಕೂ ಹೆಚ್ಚು ವಾಹನಗಳು ಪಾರ್ಕಿಂಗ್ ಲಾಟ್‌ನಲ್ಲೇ ಲಾಕ್ ಆಗಿವೆ. ನೀರಲ್ಲಿ ಬೈಕ್‌ಗಳು ಕೆಟ್ಟು ನಿಂತಿದ್ದು, ಬೈಕ್‌ಗಳನ್ನು ಹೊರ ತೆಗೆಯಲಾಗದ ಸ್ಥಿತಿ ಎದುರಾಗಿದೆ.

Share This Article