ಇದ್ದಕ್ಕಿದ್ದಂತೆ ಬೆಂಗ್ಳೂರಿನ ನಡುರಸ್ತೆಯಲ್ಲಿ 8 ಅಡಿ ಆಳದ ಬೃಹತ್ ಹೊಂಡ ಸೃಷ್ಟಿ!

Public TV
1 Min Read

ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ್ ಸಿಟಿ ಎಂದು ಪ್ರಖ್ಯಾತಿ ಪಡೆದಿರುವ ಬೆಂಗಳೂರಿನ ಹೈಫೈ ರಸ್ತೆಗಳು ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಅವುಗಳ ಡಾಂಬರ್ ಕಿತ್ತು ಹೋಗುವುದು ಗೊತ್ತಿರುವ ವಿಚಾರ. ಈಗ ಮತ್ತಷ್ಟು ಅಭಿವೃದ್ಧಿಯಾಗಿದ್ದು ರಸ್ತೆಯಲ್ಲೇ ಹೊಂಡ ನಿರ್ಮಾಣವಾಗಿದೆ.

ಹೌದು. ನಗರದಲ್ಲಿನ ಕಳಪೆ ಕಾಮಗಾರಿಗಳ ರಸ್ತೆಯ ಪಟ್ಟಿಗೆ ಇಂದು ಮತ್ತೊಂದು ರಸ್ತೆ ಸೇರ್ಪಡೆಯಾಗಿದೆ. ಕಾಟನ್ ಪೇಟೆಯ ಮುಖ್ಯರಸ್ತೆ ದಿಢೀರ್ ಕುಸಿತಗೊಂಡಿದೆ. ಸುಮಾರು 8 ಅಡಿ ಆಳದ ಕಂದಕ ನಿರ್ಮಾಣವಾಗಿದ್ದು, ಪರಿಣಾಮ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿದೆ.

ಇಂದು ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ರಸ್ತೆ ಮಧ್ಯದಲ್ಲಿಯೇ ದೊಡ್ಡ ಕಂದಕ ನಿರ್ಮಾಣವಾಗಿದೆ. ನಡು ರಸ್ತೆಯಲ್ಲಿ ಕಂದಕ ನಿರ್ಮಾಣವಾದ ಕಾರಣ ಈ ಮಾರ್ಗದಲ್ಲಿ ಓಡಾಡುವ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.

ಬಸ್ ರಸ್ತೆಯಲ್ಲಿ ಮುಂದೆ ಚಲಿಸುತ್ತಿದಂತೆ ರಸ್ತೆ ಕುಸಿತ ಆಗಿದ್ದು, ಸಂಭವಿಸಬಹುದಾಗಿದ್ದ ಅಪಾಯ ತಪ್ಪಿದೆ. ಅಲ್ಲದೇ ಏಕಾಏಕಿ ಭಾರೀ ಪ್ರಮಾಣದಲ್ಲಿ ರಸ್ತೆ ಕುಸಿತ ಸಂಭವಿಸಿದ ಕಾರಣ ಸ್ಥಳೀಯರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿತ್ತು. ರಸ್ತೆ ಕುಸಿತ ಬಗ್ಗೆ ಮಾಹಿತಿ ಪಡೆದ ಬಿಬಿಎಂಪಿ ಸಿಬ್ಬಂದಿ ಪೊಲೀಸರು ಸುತ್ತಲು ಬ್ಯಾರಿಕೇಡ್ ಹಾಕಿದ್ದು, ಜೆಸಿಬಿ ಮೂಲಕ ರಿಪೇರಿ ಕಾರ್ಯ ನಡೆಸಿದೆ. ಆದರೆ ಈ ಮಾರ್ಗವಾಗಿ ಸಂಚಾರಿಸುವ ವಾಹನ ಸವಾರರು ಮಾತ್ರ ಭಯದಿಂದಲೇ ಸಾಗುತ್ತಿದ್ದಾರೆ.

https://www.youtube.com/watch?v=sbIef5So8qI

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *