ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

Public TV
1 Min Read

ಬೆಂಗಳೂರು: ನ್ಯೂ ಇಯರ್ ವೆಲ್‌ಕಮ್‌ಗೆ (New Year Celebration) ಬೆಂಗಳೂರು ಪೊಲೀಸ್ (Bengaluru Police) ಸರ್ಪಗಾವಲಿನಲ್ಲಿ ಇರಲಿದೆ. ಈಗಾಗಲೇ ತಯಾರಿ ಶುರುವಾಗಿದ್ದು, ಕ್ಲಬ್ -ಪಬ್‌ಗಳೂ (Club, Pub) ಸಹ ತಯಾರಿ ನಡೆಸಿವೆ. ಹಾಗಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸ್ಪೆಷಲ್ ಪಿಂಕ್‌ಸ್ಕ್ವಾಡ್‌ (Police Pink Squad) ಫೀಲ್ಡಿಗಿಳಿದಿದೆ.

ಮಹಿಳಾ ಪೊಲೀಸರನ್ನು (Women Police) ವಿವಿಧ ತಂಡಗಳಾಗಿ ಮಾಡಿ ಫೀಲ್ಡ್‌ಗೆ ಇಳಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಆ ಮೂಲಕ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್

ಆಯಕಟ್ಟಿನ ಜಾಗಗಳಲ್ಲಿ ಹೆಚ್ಚುವರಿ ಸಿಸಿಟಿವಿ, 50 ಬಾಡಿ ಕ್ಯಾಮೆರಾ (BodyCamera) ಹಾಕಲು ತೀರ್ಮಾನಿಸಲಾಗಿದೆ. ಕ್ಲಬ್ ಮತ್ತು ಪಬ್ ನಲ್ಲಿ ಮಹಿಳಾ ಸಿಬ್ಬಂದಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಸಂಬಂಧಪಟ್ಟ ಕ್ಲಬ್‌ನವರೇ ಲೇಡಿ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಪ್ರತಿಯೊಂದು ಕ್ಲಬ್ ಮತ್ತು ಪಬ್, ಹೋಟೆಲ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕ್ಲಬ್ ನವರೇ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಯಾವ ಕ್ಲಬ್ ಮತ್ತು ಪಬ್‌ನಲ್ಲಿ ಎಷ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಹೋಟೆಲ್ ಮತ್ತು ಪಬ್ ಗಳಲ್ಲಿ ಯಾವುದೇ ಅವಘಡ ಸಂಭವಿಸಿದ್ರೆ ಕ್ಲಬ್ ನವರೇ ಹೊಣೆಯಾಗ್ತಾರೆ. ಪಾರ್ಟಿ ವೇಳೆ ಡ್ರಗ್ಸ್ ಬಳಕೆ ಮಾಡಿರೋದು ಗೊತ್ತಾದರೆ ಕಠಿಣ ಕ್ರಮದ ಜೊತೆಗೆ ಲೈಸೆನ್ಸ್ (ಪರವಾನಗಿ) ರದ್ದು ಮಾಡಲಾಗುತ್ತದೆ. ಇನ್ನೂ 2-3 ದಿನಗಳಲ್ಲಿ ಈ ಸಂಬಂಧ ಕಂಪ್ಲೀಟ್ ಡಿಟೇಲ್ಸ್ಗಳನ್ನ ಪೊಲೀಸ್ ಇಲಾಖೆ ಬಿಡುಗಡೆ ಮಾಡಲಿದೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *