ಕಾರ್ ಅಪಘಾತಕ್ಕೀಡಾಗಿ ತಲೆ, ಬಲಗಣ್ಣಿಗೆ ಗಾಯ- ದೂರು ದಾಖಲಾದ್ರೂ ಕ್ರಮ ಕೈಗೊಳ್ಳದ ಪೊಲೀಸ್ರು

Public TV
1 Min Read

– ಮಾಜಿ ಶಾಸಕರ ಒತ್ತಡಕ್ಕೆ ಮಣಿಯಿತಾ ಖಾಕಿ?

ಬೆಂಗಳೂರು: ಮಾಜಿ ಶಾಸಕ ವರ್ತೂರು ಪ್ರಕಾಶ್ ಅಣ್ಣನ ಮಗನಿಂದ ಕಾರು ಅಪಘಾತವಾಗಿ, ಯುವಕನೊಬ್ಬ ಗಂಭೀರ ಗಾಯಗೊಂಡು ದೂರು ದಾಖಲಾದ್ರೂ ಪೊಲೀಸರು ಯಾವುದೇ ಕ್ರಮ ಜರುಗಿಸದ ಘಟನೆ ಸಿಲಿಕಾನ್ ಸಿಸಿಟಿಲ್ಲಿ ನಡೆದಿದೆ.

ಬೆಂಗಳೂರಿನ ದೇವನಹಳ್ಳಿಯ ಕನ್ನಮಂಗಲ ಗೇಟ್ ಬಳಿ ಆಗಸ್ಟ್ 10 ರಂದು ಕಾರ್ ಅಪಘಾತ ನಡೆದಿತ್ತು. ಆದ್ರೆ ಇದೂವರೆಗೂ ಆರೋಪಿ ವಿರುದ್ಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದುದರಿಂದ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಒತ್ತಡಕ್ಕೆ ಪೊಲೀಸರು ಮಣಿದ್ರಾ ಎಂಬ ಅನುಮಾನವೊಂದು ಮೂಡಿದೆ.

ವರ್ತೂರು ಪ್ರಕಾಶ್ ಅಣ್ಣನ ಮಗ ರಕ್ಷಿತ್ ಕಾರ್ ಚಲಾಯಿಸುತ್ತಿದ್ದು, ದೇವನಹಳ್ಳಿಯಿಂದ ಬೆಂಗಳೂರಿನ ಕಡೆಗೆ ಕಾರ್ ಅತಿ ವೇಗವಾಗಿ ಬರುತ್ತಿತ್ತು. ಈ ವೇಳೆ ಸರ್ವಿಸ್ ರೋಡ್‍ನಲ್ಲಿ ನಡೆದು ಬರ್ತಿದ್ದ ಸೈಯದ್ ಸಾದ್ವಿಕ್ ಪಾಷ ಎಂಬವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸಾದ್ವಿಕ್ ತಲೆಗೆ ಪೆಟ್ಟು, ಬಲಗಣ್ಣಿಗೂ ಹಾನಿ ಹಾನಿಯಾಗಿತ್ತು.

ಮನೆಗೆ ಆಧಾರ ಸ್ತಂಭವಾಗಿದ್ದ ಸಾದ್ವಿಕ್ ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಚಿಕಿತ್ಸೆಗಾಗಿ 9 ಲಕ್ಚ ಖರ್ಚು ಮಾಡಿದ್ದು, ಇನ್ನೂ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಮನೆಗೆ ವಾಪಸ್ ಕರೆ ತಂದಿದ್ದೇವೆ. ಒಟ್ಟಿನಲ್ಲಿ ದೂರು ದಾಖಲಾಗಿ ಒಂದು ತಿಂಗಳಾದ್ರು ಪೊಲೀಸರು ಕ್ರಮ ಜರುಗಿಸದೇ ಇರುವುದರಿಂದ ಪಾಷಾ ಪೋಷಕರು ನಮಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದೀಗ ಪಾಷಾ ಪೋಷಕರ ಬೆಂಬಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಿಂತಿದ್ದು, ಅಪಘಾತ ಮಾಡಿದರವರನ್ನು ಕೂಡಲೇ ಬಂಧಿಸಬೇಕು ಅಂತ ಆರೋಪಿ ಪರ ರಕ್ಷಣೆ ನಿಂತಿರುವ ಪೊಲೀಸರ ವಿರುದ್ಧ ಕರವೇ ಆಕ್ರೋಶ ಹೊರಹಾಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *