ಸ್ವಚ್ಛತೆ ಕಾಪಾಡದ್ದಕ್ಕೆ ಬೆಂಗಳೂರು ಪಿಜಿಗೆ ಬಿತ್ತು 50 ಸಾವಿರ ದಂಡ

1 Min Read

ಬೆಂಗಳೂರು: ಉಪಹಾರ ಗೃಹದಲ್ಲಿ ಸ್ವಚ್ಛತೆ ಕಾಪಾಡದ್ದಕ್ಕೆ ಪೇಯಿಂಗ್‌ ಗೆಸ್ಟ್‌ (PG) ಒಂದಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) 50 ಸಾವಿರ ರೂ. ದಂಡ ವಿಧಿಸಿದೆ.

ಜಿಬಿಎ ಅಧಿಕಾರಿಗಳು  ಕಾಡುಗೋಡಿಯ ವೈಟ್ ರೋಸ್ ಲೇಔಟ್‌ನಲ್ಲಿರುವ ಕೋಲಿವಿಂಗ್ ಪಿಜಿಯಲ್ಲಿ ತಪಾಸಣೆ ನಡೆಸಿದ್ದಾರೆ. ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋಗೆ ನಾಳೆ 6ನೇ ರೈಲು ಸೇರ್ಪಡೆ

 
 

ಈ ವೇಳೆ ಉದ್ದಿಮೆ ಪರವಾನಿಗೆ ನವೀಕರಣವೂ ಆಗದೇ ಇರುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಅಡುಗೆ ಕೋಣೆಯಲ್ಲಿ ಸ್ವಚ್ಛತೆ(Cleanliness) ಕಾಪಾಡದೇ ಬೇಕಾಬಿಟ್ಟಿ ಆಹಾರ ತಯಾರಿಸುತ್ತಿರುವುದು ಗೊತ್ತಾಗಿದೆ.

ನೈರ್ಮಲ್ಯ ಕಾಪಾಡದೇ ಬೇಕಾಬಿಟ್ಟಿ ಆಹಾರ ತಯಾರಿಸಿದ್ದಕ್ಕೆ ಅಪರ ಆಯುಕ್ತರು (ಕಂದಾಯ) ಪ್ರಜ್ಞಾ ಅಮ್ಮೆಂಬಳ ರವರು 50 ಸಾವಿರ ರೂ. ದಂಡ ವಿಧಿಸಿದ್ದಾರೆ. ಈ ತಪಾಸಣೆಯಲ್ಲಿ ವೈದ್ಯಾಧಿಕಾರಿ ಹಾಗೂ ಆರೋಗ್ಯ ಮೇಲ್ವಿಚಾರಕರು ಹಾಜರಿದ್ದರು.

Share This Article