ಬೆಂಗಳೂರು: ರಾಜ್ಯದಲ್ಲಿ ಪದೇ ಪದೇ ಆಪರೇಷನ್ ಕಮಲ ಮಾಡಿ ಫೇಲ್ ಆಗಿರೋ ಬಿಜೆಪಿ ನಾಯಕರು ಏನಾದರೂ ಮಾಡಿ ಈ ಬಾರಿ ರಾಜ್ಯದಲ್ಲಿ ಆಪರೇಷನ್ ಕಮಲ ಸಕ್ಸಸ್ ಮಾಡಿಯೇ ಸಿದ್ಧ ಎಂದು ಎಕ್ಸ್ ಪರ್ಟ್ ಡಾಕ್ಟರ್ ಮೊರೆ ಹೋಗಿದ್ದಾರೆ.
ಹೌದು. ಬಿಜೆಪಿ ಹೈಕಮಾಂಡ್ ಆಪರೇಷನ್ ಕಮಲದ ಮಾಸ್ಟರ್ ಮೈಂಡ್ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವರ್ಗಿಯಾರನ್ನು ಬೆಂಗಳೂರಿಗೆ ಕಳುಹಿಸಿದೆ. ಅಮಿತ್ ಶಾ ಟೀಂ ನ ಕೈಲಾಶ್ ವಿಜಯ್ ವರ್ಗಿಯಾ ಆಪರೇಷನ್ ಕಮಲದ ತಂತ್ರಗಾರಿಕೆಗಳನ್ನ ರೂಪಿಸುವಲ್ಲಿ ಎಕ್ಸ್ ಪರ್ಟ್ ಆಗಿದ್ದಾರೆ.
ಇಂದು ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಿ ಸಾಕಷ್ಟು ತಂತ್ರಗಾರಿಕೆಗಳನ್ನ ರೂಪಿಸಲಿದ್ದಾರೆ ಎನ್ನಲಾಗಿದೆ. ಆದರೆ ತಾನು ಆರ್ ಎಸ್‍ಎಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ ಎಂದು ವರ್ಗೀಯಾ ಹೇಳಿದ್ದಾರೆ.
ಇತ್ತ ಕಾಂಗ್ರೆಸ್ ಕೂಡ ತಾನೇನೂ ಕಡಿಮೆ ಇಲ್ಲ ಅನ್ನೋ ಹಾಗೆ ಮಧ್ಯಪ್ರದೇಶ ಸಿಎಂ ಕಮಲ್‍ನಾಥ್, ಗುಲಾಂ ನಬೀ ಆಜಾದ್‍ರನ್ನ ರಾಜ್ಯಕ್ಕೆ ಬರ ಮಾಡಿಕೊಳ್ಳುತ್ತಿದೆ. ಶಾಸಕರು ರಾಜೀನಾಮೆ ಕೊಟ್ಟ ಬೆನ್ನಲ್ಲೇ ಕೈ ನಾಯಕರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದರು ಈ ವೇಳೆ ದೋಸ್ತಿ ಸರ್ಕಾರ ಉಳಿಸೋಕೆ ಕಾಂಗ್ರೆಸ್ ಹೈಕಮಾಂಡೇ ಅಖಾಡಕ್ಕಿಳಿದಿತ್ತು. ಕಳೆದ ಮಂಗಳವಾರ ಕೆಕೆ ಗೆಸ್ಟ್ ಹೌಸ್‍ನಲ್ಲಿ ಕಾಂಗ್ರೆಸ್ ಮುಖಂಡ ಗುಲಾಂ ನಬೀ ಆಜಾದ್ ಸಭೆ ನಡೆಸಿದ್ದರು.