ಇನ್ಸ್ಟಾದಲ್ಲಿ ಆಂಟಿಗೆ ಪ್ರೀತಿಸುವಂತೆ ಟಾರ್ಚರ್ – ಬುದ್ಧಿ ಹೇಳೋಕೆ ಬಂದವನ ಕತ್ತು ಕೊಯ್ದ ಪಾಗಲ್ ಪ್ರೇಮಿ!

Public TV
1 Min Read

– ಚಲಿಸುತ್ತಿದ್ದ ಬೈಕ್‌ನಲ್ಲೇ ಹತ್ಯೆಗೆ ಯತ್ನ

ಬೆಂಗಳೂರು: ಇನ್ಸ್ಟಾಗ್ರಾಮ್‍ನಲ್ಲಿ ಪರಿಚಯವಾಗಿದ್ದ ವಿವಾಹಿತ ಮಹಿಳೆಗೆ ಪ್ರೀತಿಸುವಂತೆ (Love) ಟಾರ್ಚರ್ ಕೊಡುತ್ತಿದ್ದ ಯುವಕನಿಗೆ ಬುದ್ಧಿ ಹೇಳಲು ಬಂದಿದ್ದಕ್ಕೆ ಕತ್ತು ಸೀಳಿ ಕೊಲೆಗೆ ಯತ್ನಿಸಿದ ಘಟನೆ ಹೆಚ್‍ಎಎಲ್‍ನಲ್ಲಿ ನಡೆದಿದೆ.

ಇನ್ಸ್ಟಾದಲ್ಲಿ ಪರಿಚಯವಾಗಿದ್ದ ಮಹಿಳೆಗೆ ತಮಿಳುನಾಡು ತಿರಪ್ಪತ್ತೂರು ಮೂಲದ ಯುವಕ ಸೆಲ್ವ ಕಾರ್ತಿಕ್ ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಯುವಕನನ್ನು ಮಾತನಾಡಲು ಹೆಚ್‍ಎಎಲ್ (HAL) ಬಳಿ ಬರಲು ಮಹಿಳೆಯ ತಂದೆ ಹಾಗೂ ಸಂಬಂಧಿಯೊಬ್ಬರು ಹೇಳಿದ್ದರು. ಈ ವೇಳೆ ಆರೋಪಿ ಕೊಲೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ಕೋಲ್ಕತ್ತಾ | ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್ ಕೇಸ್ – ಆರೋಪಿಗೆ ಜಾಮೀನು

ಮಾತುಕತೆಗೆ ಕರೆಸಿದ್ದ ಮಹಿಳೆ ತಂದೆ ಹಾಗೂ ಸಂಬಂಧಿ, ಕಾರ್ತಿಕ್‍ನನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ, ಚಲಿಸುತ್ತಿದ್ದ ಬೈಕ್‍ನಲ್ಲಿಯೇ ಆರೋಪಿ, ಸತೀಶ್ ಎಂಬವರ ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ.

ಗಾಯಾಳುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜುಲೈ 17ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಬಂಧಿಸಿರುವ ಹೆಚ್‍ಎಎಲ್ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಒಂದೇ ವಧುವನ್ನು ಮದುವೆಯಾದ ಸಹೋದರರು!

Share This Article