ಬೆಂಗಳೂರು: ಕೋರಮಂಗಲದಲ್ಲಿ (Koramangala) ಕುಡಿದ ಮತ್ತಿನಲ್ಲಿ ಕೈಯಲ್ಲಿ ಚಪ್ಪಲಿ ಹಿಡಿದು ಯುವ ಜನ ತೂರಾಡಿದ್ದಾರೆ.
ಮಧ್ಯರಾತ್ರಿ 1 ಗಂಟೆ ಆಗುತ್ತಿದ್ದಂತೆ ಪೊಲೀಸರೇ (Police) ಮುಂದೆ ನಿಂತು ಬಾರ್, ಪಬ್‌ಗಳನ್ನು ಮುಚ್ಚಿದ್ದಾರೆ. ಮುಚ್ಚುತ್ತಿದ್ದಂತೆ ಕೆಲವರು ಪೊಲೀಸರು ಜೊತೆ ಕಿರಿಕ್ ಮಾಡಿದ್ದಾರೆ.
ಪಬ್‌ನಿಂದ (Pub) ಹೊರ ಬಂದ ಕೆಲ ಯುವತಿಯರು ರಂಪಾಟ ಮಾಡಿ ರಸ್ತೆಯಲ್ಲೇ ವಾಂತಿ ಮಾಡಿದ್ದಾರೆ. ನಡೆಯಲು ಸಾಧ್ಯವಾಗದ ಗೆಳತಿಯರನ್ನು ಕೊನೆಗೆ ಗೆಳೆಯರೇ ಎತ್ತುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಎಣ್ಣೆ ಮತ್ತಿನಲ್ಲಿ ಅವಾಜ್ – ಬಿತ್ತು ಪೊಲೀಸರಿಂದ ಏಟು
ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗುತ್ತಿದ್ದಂತೆ ಮುಖ ಮುಚ್ಚಿಕೊಂಡು ಮುಂದಕ್ಕೆ ಹೆಜ್ಜೆ ಇಟ್ಟಿದ್ದಾರೆ.

