ನಡುರಸ್ತೆಯಲ್ಲಿ ಹರಿಯಿತು ನೆತ್ತರು – ಸ್ನೇಹಿತರಿಂದಲೇ ಯುವಕನ ಲೈವ್ ಮರ್ಡರ್

Public TV
1 Min Read

ನೆಲಮಂಗಲ(ಬೆಂಗಳೂರು): ನೆಲಮಂಗಲ ನಗರದಲ್ಲಿ ನಡುರಸ್ತೆಯಲ್ಲಿಯೇ ಯುವಕರ ಗುಂಪೊಂದು ಯುವಕನ ಮೇಲೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸುಭಾಷ್ ನಗರದ ಟಿಬಿ ಬಸ್ ಸ್ಟಾಪ್ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರೇವಂತ್ ಅಲಿಯಾಸ್ ಸೃಷ್ಟಿ ಎಂಬಾತನಿಗೆ ಪಲ್ಸರ್ ಬೈಕಿನಲ್ಲಿ ಬಂದ ಯುವಕರ ಗುಂಪು ಚಾಕುವಿನಿಂದ ಚುಚ್ಚಿ ಪರಾರಿಯಾಗಿದೆ.

ಯುವಕನಿಗೆ ನಡು ರಸ್ತೆಯಲ್ಲಿ ಚಾಕು ಹಿಡಿದು ಅಟ್ಟಹಾಸ ಮೆರೆದ ವೀಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದು, ಲೈವ್ ಮರ್ಡರ್ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯರು ಯವಕನನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

ಘಟನೆ ನಡೆದ ಸ್ಥಳದ ರಸ್ತೆಯ ತುಂಬೆಲ್ಲಾ ರಕ್ತ ಹರಿದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ನೆಲಮಂಗಲದಲ್ಲಿ ಮತ್ತೆ ನೆತ್ತರಿನ ಪ್ರಕರಣಗಳು ಮರುಕಳಿಸುತ್ತಿದ್ದು, ಪೊಲೀಸ್ ಇಲಾಖೆ ಇನ್ನಷ್ಟು ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ. ಪಡ್ಡೆಯುವಕರಿಗೆ ಕಡಿವಾಣಹಾಕಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಇದನ್ನೂ ಓದಿ: ಬಾಲಕಿ ಮೇಲೆ ಲೈಂಗಿಕ ಕಿರುಕುಳ ಪ್ರಕರಣ – ಠಾಣೆ ಬಳಿ ಓಡೋಡಿ ಬಂದಿದ್ದ ಶಾಸಕ ಬೈರತಿ ಸುರೇಶ್

Share This Article
Leave a Comment

Leave a Reply

Your email address will not be published. Required fields are marked *