ಊರಲ್ಲಿರೋ ಮಕ್ಕಳೆಲ್ಲಾ ನನ್ನವೇ ಅಂದ್ರೆ ಕಾಲಲ್ಲಿರೋದು ಕೈಗೆ ತಗೋತಾರೆ – ಸಿ.ಟಿ ರವಿ ಕಿಡಿ

Public TV
1 Min Read

ರಾಯಚೂರು: ಊರಲ್ಲಿರುವ ಮಕ್ಕಳೆಲ್ಲಾ ನನ್ನವೇ ಅಂದ್ರೆ, ಯಾರಾದ್ರೂ ಕಾಲಲ್ಲಿ ಇರೋದನ್ನ ಕೈಗೆ ತಗೋತಾರೆ. ಈಗ ಕಾಂಗ್ರೆಸ್‌ನದ್ದೂ (Congress) ಅದೇ ಪರಿಸ್ಥಿತಿ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CR Ravi) ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

ExpressWay

ರಾಯಚೂರಿನಲ್ಲಿ (Raichur) ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆ ಮಾತನಾಡಿದ ಅವರು, ಊರಲ್ಲಿರುವ ಮಕ್ಕಳೆಲ್ಲ ನನ್ನವೇ ಅಂದ್ರೆ ಯಾರಾದ್ರೂ ಕಾಲಲ್ಲಿ ಇರೋದನ್ನ ಕೈಗೆ ತಗೋತಾರೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ (Bengaluru Mysuru Expressway) ಕಾಂಗ್ರೆಸ್‌ನಿಂದ ಒಂದೇ ಒಂದು ರೂಪಾಯಿ ಕೊಡುಗೆಯಿಲ್ಲ, ಇದ್ದರೆ ತೋರಿಸಲಿ? ಕಾಂಗ್ರೆಸ್ ಸುಳ್ಳು ಹೇಳುತ್ತೋ ಸತ್ಯ ಹೇಳುತ್ತೋ ಅನ್ನೋದು ಜನರಿಗೆ ಗೊತ್ತಾಗುತ್ತೆ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಸುಮಲತಾ ಶುಕ್ರವಾರ ಬಿಜೆಪಿ ಸೇರ್ತಾರೆ: ಶಾಸಕ ಪುಟ್ಟರಾಜು

MYS SIDDARAMAIAH 1

ಕಾಂಗ್ರೆಸ್ ತನ್ನ ಅವಧಿಯಲ್ಲಿ ಹಣ ಬಿಡುಗಡೆ ಮಾಡಿದ್ರೆ, ಟೆಂಡರ್ ಕರೆದಿದ್ರೆ, ಮಂಜೂರಾತಿ ಪತ್ರ ಇದ್ದರೆ ಬಿಡುಗಡೆ ಮಾಡಲಿ. ಕಾಂಗ್ರೆಸ್ ಜನ್ಮದಿಂದಲೂ ಮೂಗಿಗೆ ತುಪ್ಪ ಸವರೊ ಕೆಲಸ ಮಾಡಿಕೊಂಡು ಬಂದಿದೆ. ಹಿಂದೆ 10 ವರ್ಷ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು. 5 ವರ್ಷ ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ರು. ಆಗ ಯಾಕೆ ಅನುಮೋದನೆ ಕೊಡಲಿಲ್ಲ? ಅದಕ್ಕೆ ಮೋದಿಯೇ ಬರಬೇಕಾಯಿತು. ಡಬಲ್ ಇಂಜಿನ್ ಸರ್ಕಾರ ಮಾಡಿದ ಕೆಲಸಕ್ಕೆ ತಮ್ಮ ಸೀಲ್ ಹಾಕೋಕೆ ಹೋಗೋದು ನಾಚಿಕೆಯಿಲ್ಲದವರು ಮಾಡುವ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು

Share This Article
Leave a Comment

Leave a Reply

Your email address will not be published. Required fields are marked *