ಮಾರತ್‍ಹಳ್ಳಿ ಶೂಟೌಟ್- 17 ಪುಟಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟ ಲವ್ ಸ್ಟೋರಿ

Public TV
2 Min Read

-ಡಿಯರ್ ಸೊಸೈಟಿ, ಇದು ನನ್ನ ಪ್ರೇಮಕಥೆ
-ಸಂಸ್ಕೃತದಿಂದ ಆರಂಭಿಸಿ ಒಡಿಯಾ ಭಾಷೆಯಲ್ಲಿ ಮುಗಿಸಿದ್ದ

ಬೆಂಗಳೂರು: ಮಾರತ್‍ಹಳ್ಳಿಯಲ್ಲಿ ಪ್ರೇಯಸಿಯನ್ನು ಶೂಟ್ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ್ದ ಅಮರೇಂದ್ರ ಪಟ್ನನಾಯಕ್ ಬರೆದ 17 ಪುಟಗಳ ಡೆತ್‍ನೋಟ್ ನಲ್ಲಿ ಬರೆದ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

17 ಪುಟಗಳಲ್ಲಿ ತನ್ನ ಪ್ರೇಮ ಕಥೆಯನ್ನು ಬಿಚ್ಚಿಟ್ಟಿರುವ ಅಮರೇಂದ್ರ ಪತ್ರವನ್ನು ಸಂಸ್ಕøತದಲ್ಲಿ ಆರಂಭಿಸಿ ಓಡಿಯಾ ಭಾಷೆಯಲ್ಲಿ ಅಂತ್ಯಗೊಳಿಸಿದ್ದಾನೆ. ಪೂರ್ವನಿರ್ಧರಿತವಾಗಿ ಹೈದರಾಬಾದ್ ನಿಂದ ಬೆಂಗಳೂರಿಗೆ ಅಮರೇಂದ್ರ ಬಂದಿದ್ದನು. ಬರುವಾಗಲೇ ಗನ್ ಜೊತೆ ಡೆತ್ ನೋಟ್ ಬರೆದುಕೊಂಡು ಬಂದಿದ್ದನು. ಮಾರತ್‍ಹಳ್ಳಿಯ ಪಿಜಿ ಬಳಿ ಗೆಳತಿಯನ್ನು ಶೂಟ್ ಮಾಡಿ, ಔಟರ್ ರಿಂಗ್ ರೋಡ್ ಆತ್ಮಹತ್ಯೆಗೆ ಯತ್ನಿಸಿದ್ದನು. ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿತ್ತು. ಸದ್ಯ ಆರೋಪಿ ಅಮರೇಂದ್ರ ಮತ್ತು ಯುವತಿ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಡಿಯರ್ ಸೊಸೈಟಿ ಎಂದು ಆರಂಭಿಸಿರುವ ಅಮರೇಂದ್ರದಲ್ಲಿ ಮೊದಲಿಗೆ ಸರ್ವೇಜನ ಸುಖಿನೋ ಭವಂತು ಎಂದು ಬರೆದಿದ್ದಾನೆ. ಸಮಾಜದಲ್ಲಿ ಪ್ರೀತಿಗೆ ಬೇರೆ ಬೇರೆ ವ್ಯಾಖ್ಯಾನಗಳಿದ್ದು, ಈ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ನನ್ನ ಪ್ರೀತಿ ಬಗ್ಗೆ ನನಗೆ ತುಂಬಾನೇ ಗೌರವ ಇದೆ. ಪ್ರೀತಿ ಸುಮ್ಮನೇ ಬರಲ್ಲ. ನಾನು ಸಹ ನನ್ನ ಪ್ರೀತಿಗಾಗಿ ತುಂಬಾನೇ ತ್ಯಾಗ ಮಾಡಿದ್ದೇನೆ. ಹಲವು ಬಾರಿ ತ್ಯಾಗ ಮಾಡಬೇಕಾದ ಪರಿಸ್ಥಿತಿಯೂ ಬಂತು. ನನ್ನ ಹಾಗೆ ಎಲ್ಲರೂ ತಮ್ಮ ಪ್ರೀತಿಗಾಗಿ ಒಂದಲ್ಲ ಒಂದು ರೀತಿ ತ್ಯಾಗ ಮಾಡಿರುತ್ತಾರೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಹೈದರಾಬಾದ್‍ನಿಂದ ಬಂದು ಪ್ರೇಯಸಿಗೆ ಗುಂಡಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

ನನ್ನ ಮರಣದ ಬಳಿಕ ಅಂಗಾಂಗ ದಾನಿ ಮಾಡಿ, ವೈದ್ಯಕೀಯ ಕಾಲೇಜಿಗೆ ದೇಹವನ್ನು ತಲುಪಿಸಿ. ನನ್ನ ಇಪಿಎಫ್ ಹಣ ಕುಟುಂಬಸ್ಥರಿಗೆ ಸೇರಬೇಕು. ನನ್ನ ಪ್ರೇಯಸಿ ಜೀವನ ಚೆನ್ನಾಗಿರಲಿ. ಗೆಳತಿ ಶುಭಶ್ರೀ ಪ್ರಿಯದರ್ಶಿನಿ ಮತ್ತು ಅಕ್ಕ ಗಾಯಿತ್ರಿ ಹೆಸರು ಉಲ್ಲೇಖಿಸಿದ್ದಾನೆ. ನನ್ನ ಪ್ರೀತಿಯನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನಾನು ಈಗಲೂ ಶುಭಶ್ರೀಯನ್ನು ಇಷ್ಟಪಡುತ್ತೇನೆ. ಈ ಕ್ಷಣ ನಾನು ಯಾರನ್ನು ದೂರಲ್ಲ. ಗುಡ್ ಬೈ ಸೊಸೈಟಿ ಎಂದು ಬರೆದು ಹೀಗೆ ಹಲವು ವಿಷಯಗಳನ್ನು ಅಮರೇಂದ್ರ ಹಂಚಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಯುವತಿಯ ಮೇಲೆ ಗುಂಡಿನ ದಾಳಿ

ಏನಿದು ಪ್ರಕರಣ?
ಓಡಿಶಾ ಮೂಲದ ಶುಭಶ್ರೀ ಪ್ರಿಯದರ್ಶಿನಿ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಕೆಲಸ ಮಾಡಿಕೊಂಡು, ಪಿಜಿಯಲ್ಲಿ ವಾಸವಾಗಿದ್ದರು. ಆರೋಪಿ ಅಮರೇಂದ್ರ ಪಟ್ನನಾಯಕ್ ಮತ್ತು ಶುಭಶ್ರೀ ಇಬ್ಬರೂ ಎರಡು ವರ್ಷದಿಂದ ಪ್ರೀತಿಯಲ್ಲಿದ್ದರು. ಹೈದರಾಬಾದ್ ನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಅಮರೇಂದ್ರ ಬ್ರೇಕಪ್ ಮಾಡಿಕೊಂಡು ಬೇರೆ ಯುವತಿ ಜೊತೆ ಮದುವೆಗೆ ಸಿದ್ಧವಾಗಿದ್ದನು. ಅಮರೇಂದ್ರ ಮದುವೆ ಆಗುತ್ತಿದ್ದ ಯುವತಿಗೆ ಇಬ್ಬರ ಕೆಲ ಫೋಟೋಗಳನ್ನು ಶುಭಶ್ರೀ ಕಳಿಸಿದ್ದಳು. ಫೋಟೋಗಳಿಂದಾಗಿ ಅಮರೇಂದ್ರ ಮದುವೆ ಕ್ಯಾನ್ಸಲ್ ಆಗಿತ್ತು.

ಮದುವೆ ನಿಂತಿದ್ದರಿಂದ ಕೋಪಗೊಂಡ ಅಮರೇಂದ್ರ ಹೈದರಾಬಾದ್ ನಿಂದ ಶುಭಶ್ರೀಯನ್ನು ಕೊಲ್ಲಲು ಬೆಂಗಳೂರಿಗೆ ಬಂದಿದ್ದನು. ಮಾರತ್ತಹಳ್ಳಿಯ ಮಂಜುನಾಥ್ ಲೇಔಟ್ ಬಳಿಯನ ಲೇಡಿಸ್ ಬಳಿ ನಿಂತಿದ್ದ ಮಾಜಿ ಪ್ರೇಯಸಿ ಶುಭಶ್ರೀಗೆ ಗುಂಡು ಹೊಡೆದು ಪರಾರಿಯಾಗಿದ್ದನು.

Share This Article
Leave a Comment

Leave a Reply

Your email address will not be published. Required fields are marked *