ಮಳೆ ಅಬ್ಬರ; 5 ತಿಂಗಳು ಬೆಂಗಳೂರು, ಮಂಗಳೂರು ರೈಲು ಸಂಚಾರ ಸ್ಥಗಿತ

Public TV
1 Min Read

ಮಂಗಳೂರು: ಚಿಕ್ಕಮಗಳೂರಿನ ಮೂಡಿಗೆರೆಯ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಂಜು ಆವರಿಸಿದೆ. ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿಗಾಗಿ ನಾಳೆಯಿಂದ 5 ತಿಂಗಳು ಮಂಗಳೂರು-ಬೆಂಗಳೂರು ನಡುವಿನ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲುಗಳು ಸಂಚಾರ ಬಂದ್ ಆಗುತ್ತಿದೆ.

ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಮೊದಲ ಬಾರಿಗೆ ಗೌರಿ ಹೊಳೆ ಅಬ್ಬರಿಸ್ತಿದೆ. ಮನೆಗಳು ಭಾಗಶ ಮುಳುಗಡೆಯಾಗಿದ್ದು, ಎನ್‌ಡಿಆರ್‌ಎಫ್ ರಕ್ಷಿಸಿದೆ. ಸವಣೂರು ಸರ್ವೆ ಎಂಬಲ್ಲಿ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತವಾಗಿದೆ.

ಉಳ್ಳಾಲದ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿದು ದುರ್ಮರಣಕ್ಕೀಡಾದ ಅಜ್ಜಿ ಪ್ರೇಮಾ, ಮೊಮ್ಮಕ್ಕಳಾದ ಆರ್ಯನ್-ಆರುಷ್ ಅಂತ್ಯಕ್ರಿಯೆಯನ್ನು ಮನೆ ಪಕ್ಕದ ಜಾಗದಲ್ಲಿ ನಡೆಸಲಾಯಿತು. ಮಕ್ಕಳನ್ನು ನೋಡಿ ಕುಟುಂಬಸ್ಥರು, ಸಂಬAಧಿಕರು ಶೋಕಸಾಗರದಲ್ಲಿ ಮುಳುಗಿದರು. ತಾಯಿ ಅಶ್ವಿನಿ 2 ಕಾಲಿನ ಸ್ವಾಧೀನ ಕಳೆದುಕೊಂಡ ಕಾರಣ ವೈದ್ಯರು 2 ಕಾಲನ್ನೂ ಕತ್ತರಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಾವ ಕಾಂತಪ್ಪ ಪೂಜಾರಿಗೆ ಚೇತರಿಸಿಕೊಳ್ತಿದ್ದಾರೆ.

ಕೆಆರ್‌ಎಸ್ 101 ಅಡಿಗೆ ನೀರು ತಲುಪಿದ್ದರೆ, ಕಬಿನಿ ಡ್ಯಾಮ್ ಭರ್ತಿ ಹಂತಕ್ಕೆ ಬಂದಿದೆ. 18,018 ಕ್ಯೂಸೆಕ್ ಒಳ ಹರಿವಿದ್ದು, 2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,280 ಅಡಿ ನೀರು ಸಂಗ್ರಹವಾಗಿದೆ.

Share This Article