ಕುಟುಂಬಕ್ಕಾಗಿ ಬೆಂಗಳೂರಿನ ಕಾರ್ಪೊರೇಟ್ ಕೆಲಸಕ್ಕೆ ಗುಡ್‌ಬೈ – ಈಗ ಉಬರ್ ಚಾಲಕ, ಹೆಚ್ಚು ಸಂಪಾದನೆ

Public TV
1 Min Read

– 8 ವರ್ಷ ಕೆಲಸ ಮಾಡಿದ್ದರೂ ಕೇವಲ 40 ಸಾವಿರ ಸಂಪಾದನೆ

ಬೆಂಗಳೂರು: ವ್ಯಕ್ತಿಯೋರ್ವ ಕುಟುಂಬದ ಜೊತೆ ಕಾಲಕಳೆಯೋಕೆ ಸಮಯ ಸಿಗ್ತಿಲ್ಲ ಎಂದು ಕಾರ್ಪೊರೇಟ್ ಕೆಲಸ ಬಿಟ್ಟು, ಉಬರ್ (Uber) ಚಾಲಕನಾಗಿ ತಿಂಗಳಲ್ಲಿ 21 ದಿನ ಮಾತ್ರ ಕೆಲಸ ಮಾಡಿ, 56 ಸಾವಿರ ರೂ. ಗಳಿಸುತ್ತಿದ್ದಾರೆ.

ಹೌದು, ಬೆಂಗಳೂರು (Bengaluru) ಮೂಲದ ದೀಪೇಶ್ ಎಂಬ ಉಬರ್ ಚಾಲಕನ ಸ್ಫೂರ್ತಿದಾಯಕ ಕಥೆಯನ್ನು ಉದ್ಯಮಿಯೊಬ್ಬರು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಖ್ಯಾತ ರಿಟೇಲ್ ಕಂಪನಿಯೊಂದರಲ್ಲಿ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದ ದೀಪೇಶ್ ಅವರು ತಿಂಗಳಿಗೆ 40,000 ರೂ. ಸಂಬಳ ಪಡೆಯುತ್ತಿದ್ದರು. ಕೆಲಸ, ಸಂಬಳ ಎಲ್ಲವೂ ಹೊಂದಿಕೊಂಡು ಹೋದರೂ ಕೂಡ ಅವರಿಗೆ ಹೆಂಡತಿ ಹಾಗೂ ಮಕ್ಕಳೊಂದಿಗೆ ಕಾಲಕಳೆಯೋಕೆ ಸಮಯ ಸಿಗುತ್ತಿರಲಿಲ್ಲ. ಈ ಕೆಲಸ ತಮ್ಮ ವೈಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರಿತುಕೊಂಡ ದೀಪೇಶ್ ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿ, ಫುಲ್ ಟೈಮ್ ಚಾಲಕರಾಗಲು ನಿರ್ಧರಿಸಿದರು.ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಸ್ರೇಸನ್ ಲೈಸೆನ್ಸ್ ರದ್ದು, ಕಂಪನಿ ಬಂದ್

ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಉಬರ್ ಚಾಲಕನಾಗಿರುವ ದೀಪೇಶ್ ಇದೀಗ ತಿಂಗಳಲ್ಲಿ ಕೇವಲ 21 ದಿನ ಕೆಲಸ ಮಾಡಿ, 56,000 ರೂ. ಗಳಿಸುತ್ತಾರೆ. ಈ ಮೂಲಕ ಕಣ್ಮರೆಯಾಗಿದ್ದ ವೈಯಕ್ತಿಕ ಜೀವನವನ್ನು ಕಂಡುಕೊಳ್ಳುತ್ತಿದ್ದಾರೆ. ಅಲ್ಲದೇ ಚಾಲಕರಾಗಿ ಗಳಿಸಿದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡಿ, ಕಾರೊಂದನ್ನು ಖರೀದಿಸಿದ್ದಾರೆ. ಜೊತೆಗೆ ಆ ಕಾರಿಗೆ ಡ್ರೈವರ್‌ನ್ನು ಕೂಡ ನೇಮಿಸಿಕೊಂಡಿದ್ದಾರೆ.

ಕೆಲವೊಮ್ಮೆ ಜೀವನದಲ್ಲಿ ನಾವು ಮುಂದುವರೆಯಬೇಕೆಂದರೆ ನಮ್ಮ ಪಯಣದ ಚಾಲಕ ನಾವಾಗಿರಬೇಕು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದು, ಜೀವನದಲ್ಲಿ ಬೆಳೆಯಬೇಕೆಂದರೆ ನಮ್ಮ ಜೀವನದ ಚಾಲಕನ ಸ್ಥಾನದಲ್ಲಿ ನಾವೇ ಇರಬೇಕು ಎಂದು ಬರೆದಿದ್ದಾರೆ.ಇದನ್ನೂ ಓದಿ: ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ – ಗ್ಯಾರಂಟಿಯನ್ನು ಟೀಕಿಸಿದ ಬೆನ್ನಲ್ಲೇ ದೇಶಪಾಂಡೆ ಸ್ಪಷ್ಟನೆ

Share This Article