ಬೆಂಗಳೂರು ಮಹಿಳೆಯರೇ ಎಚ್ಚರ – ಹೆಂಗಸರ ಒಳಉಡುಪು ಕದಿಯೋ ಸೈಕೋ ಬಂದಿದ್ದಾನೆ ಹುಷಾರ್!

Public TV
1 Min Read

ಬೆಂಗಳೂರು: ಸೈಕೋಪಾತ್ ಒಬ್ಬ ಮೆಟ್ರೋ ರೈಲಿನ ಚಾಲಕಿಯರಿಗೆ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.

ಸೈಕೋ ಇದೇ ತಿಂಗಳ 10 ರಂದು ಮಧ್ಯರಾತ್ರಿ 2 ಗಂಟೆಗೆ ಬೈಯಪ್ಪನಹಳ್ಳಿಯ ಬಿಎಂಆರ್‍ಸಿಎಲ್ ಕ್ವಾಟ್ರಸ್‍ನಲ್ಲಿ ನಾಲ್ವರು ಯುವತಿಯರು ವಾಸವಿದ್ದ ಫ್ಲ್ಯಾಟ್‍ಗೆ ನುಗ್ಗಿದ್ದಾನೆ. ಯುವತಿಯರು ಮಲಗಿದ್ದಾಗ ಅವರ ಬಳಿ ಕುಳಿತುಕೊಂಡಿದ್ದಾನೆ. ನಂತರ ಯುವತಿಯರಲ್ಲಿ ಒಬ್ಬರಿಗೆ ಎಚ್ಚರವಾಗಿ ಕೂಗಿಕೊಂಡಿದ್ದಾರೆ.

ನಂತರ ಯಾರು ನೀನು? ಎಲ್ಲಿಂದ ಬಂದಿದ್ದು? ಎಂದು ಸೈಕೋನನ್ನು ಕೇಳಿದ್ದಾರೆ. ಸೈಕೋ ಮೊದಲು ನಾನು ವಾಚ್‍ಮನ್ ಎಂದು ಹೇಳಿಕೊಂಡಿದ್ದು, ನಂತರ ನಾನು ಕಳ್ಳತನ ಮಾಡುತ್ತಿದ್ದೆ, ಹೀಗಾಗಿ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದಿದ್ದಾನೆ.

ಸೈಕೋ 10 ನಿಮಿಷಗಳ ಕಾಲ ಯುವತಿಯರ ಬಳಿ ಚಾಕು ಹಿಡಿದು ನಿಂತಿದ್ದ. ಬಳಿಕ ಬಾಲ್ಕನಿಗೆ ಹೋಗಿ ಯುವತಿಯರ ಒಳ ಉಡುಪನ್ನು ಮೂಸಿ ನೋಡಿ, ಇದು ನಿನ್ನದ, ನಿನ್ನದ ಎಂದು ನಾಲ್ವರು ಯುವತಿಯರನ್ನು ಕೇಳಿದ್ದಾನೆ. ಯುವತಿಯರು ಭಯದಿಂದ ನನ್ನದಲ್ಲ ನನ್ನದಲ್ಲ ಎಂದು ಹೇಳಿದಾಗ ಸೈಕೋ ಒಳ ಉಡುಪನ್ನು ಬಿಸಾಕಿದ್ದಾನೆ. ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಸೈಕೋ ಮನೆಯಲ್ಲಿ ಕೂತು ಸಿಗರೇಟ್ ಸೇದಿ, ಮನೆಯಲ್ಲೇ ಉಗಿದಿದ್ದಾನೆ. ನಂತರ ಇಬ್ಬರು ಯುವತಿಯರು ಸೆಕ್ಯುರಿಟಿಯನ್ನ ಕರೆತಂದಿದ್ದಾರೆ. ಘಟನೆಯಿಂದ ಭಯಗೊಂಡ ಮೆಟ್ರೊ ಚಾಲಕಿ ಅರ್ಪಿತಾ ಈ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ವಿಕೃತ ಕಾಮಿ ಪ್ರತ್ಯಕ್ಷನಾಗಿದ್ದು, ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ಸೈಕೋ ಕಾಣಿಸಿಕೊಂಡಿದ್ದನು. ಹುಡುಗಿಯರ ಒಳ ಉಡುಪುಗಳನ್ನ ಧರಿಸಿ ಅರೆ ನಗ್ನವಾಗಿ ಹಾಸ್ಟೆಲ್‍ನಲ್ಲಿ ಓಡುತ್ತಿರುವ ಸೈಕೋ ಹುಡುಗನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಹುಡುಗಿಯರ ರೂಂಗಳನ್ನು ಕಿಟಕಿಯಿಂದ ಈತ ಇಣುಕಿ ನೋಡುತ್ತಿದ್ದು, ಹಾಸ್ಟೆಲ್ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು. ನಂತರ ಹೈಗ್ರೌಂಡ್ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು

https://www.youtube.com/watch?v=_yf0IfLtJFE

Share This Article
Leave a Comment

Leave a Reply

Your email address will not be published. Required fields are marked *