ಕೊರೊನಾ ಮಣಿಸಿ ಯುವಕನಿಗೆ ಮರುಜನ್ಮ ನೀಡಿದ ವೈದ್ಯರಿಂದ ಸರ್ಪ್ರೈಸ್

Public TV
1 Min Read

– ವೈದ್ಯರು, ನರ್ಸ್‍ಗಳ ಚಪ್ಪಾಳೆಗೆ ಕರಗಿ ಭಾವುಕನಾದ ಯುವಕ

ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಅನ್ನು ಮಣಿಸಿ ಯುವಕನಿಗೆ ಮರುಜನ್ಮ ನೀಡಿದ್ದಷ್ಟೇ ಅಲ್ಲದೆ, ವೈದ್ಯರು, ನರ್ಸ್‍ಗಳು ಚಪ್ಪಾಳೆ ಮೂಲಕ ಆತನನ್ನು ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ.

ಹೌದು. ಇಂತಹ ಹೃದಯಸ್ಪರ್ಶಿ ಸನ್ನಿವೇಶ ಕಂಡು ಬಂದಿದ್ದು ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ. ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖವಾದ ಯುವಕ ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ. ಯುವಕ ಆಸ್ಪತ್ರೆಯಿಂದ ಮನೆಗೆ ಹೊರಡುವ ಮುನ್ನ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಚಪ್ಪಾಳೆ ತಟ್ಟಿ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕಿತ ರಾಜ್ಯದ 10 ತಿಂಗಳ ಮಗು ಗುಣಮುಖ- ತಾಯಿ, ಅಜ್ಜಿಗೂ ನೆಗೆಟಿವ್

ವಿಶೇಷವೆಂದರೆ ಆಸ್ಪತ್ರೆಯ ಆವರಣದಲ್ಲಿನ ಹೂಗಳನ್ನು ಬಳಸಿ ಪುಷ್ಪಗುಚ್ಚ ಮಾಡಿ ಯುವಕನಿಗೆ ನೀಡಿದ್ದಾರೆ. ಚಿಕಿತ್ಸೆ ನೀಡಿ ಮರುಜನ್ಮ ನೀಡಿದ ವೈದ್ಯರು, ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಡುವುದನ್ನು ಕಂಡು ಯುವಕ ಭಾವುಕನಾಗಿದ್ದ. ಈ ವೇಳೆ ವೈದ್ಯರ ಕಾಲುಗಳಿಗೆ ನಮಸ್ಕರಿಸಿ ಅಲ್ಲಿಂದ ಮನೆಗೆ ತೆರಳಿದ್ದಾನೆ.

ರಾಜ್ಯದಲ್ಲಿ ಶನಿವಾರ ಕೂಡ 8 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 215ಕ್ಕೆ ಏರಿಕೆಯಾಗಿದೆ. ನಂಜನಗೂಡು ನೌಕರನಿಂದ ಮತ್ತೆ ಐವರಿಗೆ ಕೊರೊನಾ ಹಬ್ಬಿದೆ. ಬೆಂಗಳೂರಲ್ಲಿ ಡಾಕ್ಟರ್ ಹಾಗೂ 10 ವರ್ಷದ ಬಾಲಕನಿಗೆ ಕೊರೊನಾ ಬಂದಿರುವುದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಈ ಮೂಲಕ ಬೆಂಗಳೂರಲ್ಲಿ 73 ಪಾಸಿಟಿವ್ ಕೇಸ್ ದಾಖಲಾಗಿದೆ. ಇದರಲ್ಲಿ ಪುರುಷರ ಸಂಖ್ಯೆ 47 ಇದ್ದರೆ ಮಹಿಳೆಯರ ಸಂಖ್ಯೆ 25 ಇದೆ. ಬೀದರ್ ನಲ್ಲಿ ದೆಹಲಿ ಜಮಾತ್ ಹೋಗಿದ್ದ ವ್ಯಕ್ತಿಯ ಅತ್ತಿಗೆಗೆ ಪಾಸಿಟಿವ್ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *