ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೋ ಸಂಚಾರ ಜಾಲ: ತೇಜಸ್ವಿ ಸೂರ್ಯ

Public TV
4 Min Read

– ಮೆಟ್ರೋ ಸೇವೆ ಕೊಡಲು ಬಿಜೆಪಿಗೆ ಇರುವ ಅರ್ಜೆಂಟ್ ಕಾಂಗ್ರೆಸ್‌ಗೆ ಇಲ್ಲ – ಸಂಸದ

ಬೆಂಗಳೂರು: ಬೆಂಗಳೂರಿನ ಮೆಟ್ರೋ (Bengaluru Metro) ಕನೆಕ್ಟಿವಿಟಿ ಸುಮಾರು 100 ಕಿ.ಮೀ ತಲುಪಲು ಅದಕ್ಕೆ ನರೇಂದ್ರ ಮೋದಿಯವರ (Narendra Modi) ಸರ್ಕಾರ ಮತ್ತು ಪ್ರಧಾನಿಯವರು ಬೆಂಗಳೂರಿನ ಮೂಲಭೂತ ಸೌಕರ್ಯಕ್ಕೆ ಕೊಟ್ಟ ಆದ್ಯತೆಯೇ ಕಾರಣ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿ ಮೋದಿಯವರು ಪ್ರಧಾನಿ ಆಗುವುದಕ್ಕೆ ಮೊದಲು ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಇದ್ದದ್ದು ಸುಮಾರು 7.5 ಕಿ.ಮೀ. ಆ.10ರಂದು ಯೆಲ್ಲೋ ಲೈನ್ ಉದ್ಘಾಟನೆಯ ನಂತರ ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಸುಮಾರು 100 ಕಿ.ಮೀ ತಲುಪಲಿದೆ. ದೆಹಲಿ ನಂತರ ಅತಿ ಹೆಚ್ಚು ಕನೆಕ್ಟಿವಿಟಿ ಇರುವ, ವಿಸ್ತರಣೆ ಆಗುತ್ತಿರುವ ಮೆಟ್ರೊ ಇದು ಎಂದು ವಿವರ ನೀಡಿದರು. ಇದನ್ನೂ ಓದಿ: ಟ್ರಂಪ್ ಸುಂಕ ಮೋದಿ ವಿದೇಶಾಂಗ ನೀತಿಯ ದುರಂತ: ಮಲ್ಲಿಕಾರ್ಜುನ ಖರ್ಗೆ ಆರೋಪ

ಪ್ರಧಾನಿಯವರನ್ನು ಯಾರು ಕರೆಸಿದರು ಎಂಬುದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಬೆಂಗಳೂರಿನ ಮೆಟ್ರೋ ಆದಷ್ಟು ಬೇಗ ಉದ್ಘಾಟನೆ ಆಗಬೇಕು, ವಿಳಂಬ ಸಲ್ಲದೆಂದು ಪ್ರಧಾನಿಯವರು ದಿನಾಂಕ ನಿಗದಿಪಡಿಸಿ ಬರುತ್ತಿದ್ದಾರೆ. ಅವರು ಕರ್ನಾಟಕ, ದೆಹಲಿ ಮಾತ್ರವಲ್ಲ ಭಾರತದ ಪ್ರಧಾನಿ. ಅವರ ಆಗಮಿಸುವಿಕೆಯನ್ನು ರಾಜ್ಯ ಸರ್ಕಾರ, ಬಿಜೆಪಿ, ಇಲ್ಲಿನ ಜನತೆ ಉತ್ಸಾಹ, ಹಬ್ಬದಂತೆ ಸ್ವಾಗತಿಸಲು ಸಜ್ಜಾಗಬೇಕಿದೆ. ಅಂತೆಯೇ ಅವರ ಸ್ವಾಗತ ಕಾರ್ಯಕ್ಕೆ ಎಲ್ಲರೂ ಸಜ್ಜಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯಿಂದ ಯೆಲ್ಲೋ ಮೆಟ್ರೋ ಲೈನ್ ಲೋಕಾರ್ಪಣೆ; ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ

ಯೆಲ್ಲೋ ಲೈನಿನ ಮೆಟ್ರೊ ಬಗ್ಗೆ ಸಿಎಂ, ಡಿಸಿಎಂ ತಲೆ ಕೆಡಿಸಿಕೊಂಡಿಲ್ಲ.
ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಉಪಮುಖ್ಯಮಂತ್ರಿಗಳು ಬುಧವಾರ ಯೆಲ್ಲೋ ಲೈನಿನ ಮೆಟ್ರೋದಲ್ಲಿ ಓಡಾಡಿದರು. ಇದು ಶೇ 50-50ರ ಯೋಜನೆ. ನಮ್ಮದೂ ದೊಡ್ಡ ಕೊಡುಗೆ ಇದೆ ಎಂದಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳು ಯೆಲ್ಲೋ ಲೈನಿನ ಮೆಟ್ರೋ ಬಗ್ಗೆ ಒಂದು ದಿನವೂ ತಲೆ ಕೆಡಿಸಿಕೊಂಡಿಲ್ಲ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು. ಆ.10ರಂದು ಪ್ರಧಾನಿಯವರು ಉದ್ಘಾಟಿಸಲು ಆಗಮಿಸುತ್ತಾರೆ ಎಂದ ತಕ್ಷಣ, ಬುಧವಾರ ಪ್ರಚಾರ ಗಿಟ್ಟಿಸಿಕೊಳ್ಳಲು ಟೂರ್ ಹೊಡೆಯಲು ಶುರು ಮಾಡಿದ್ದಾರೆ. ಈ ಮೆಟ್ರೋ ಲೈನಿನ ಕೆಲಸ 2018ರಲ್ಲಿ ಆರಂಭವಾಗಿತ್ತು. 2021ಕ್ಕೆ ಇದು ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ನಿಂದ ಕೆಲವು ಸಮಸ್ಯೆಗಳಾದವು. ಭೂಮಿ ಸ್ವಾಧೀನದಲ್ಲೂ ಕೆಲವು ಸಮಸ್ಯೆಗಳಾದವು. ಆಗ ಕಾಂಗ್ರೆಸ್ಸಿನವರು, ಇನ್ನೊಬ್ಬರಾಗಲಿ ಸಹಾಯಕ್ಕೆ ಬರಲಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕಾರವಾರ| ಧಾರಾಕಾರ ಮಳೆಗೆ ಕುಸಿದ 2 ಮನೆಗಳು

ಪೂರ್ಣಾವಧಿ ಎಂ.ಡಿ ನೇಮಕ ಮಾಡಿರಲಿಲ್ಲ:
ಕೋವಿಡ್ ಅವಧಿಯಲ್ಲಿ ಯಡಿಯೂರಪ್ಪ ಅವರ ಸರ್ಕಾರವಿತ್ತು. ಕೋವಿಡ್ ಮಧ್ಯದಲ್ಲೂ ಸಿವಿಲ್ ಕೆಲಸಗಳು ನಮ್ಮ ಸರ್ಕಾರದ ಅವಧಿಯಲ್ಲಿ ನಡೆಯಿತು. ಕಾರ್ಮಿಕರನ್ನು ಕರೆಸಲು ಸಮಸ್ಯೆ ಆಗಿದ್ದು, ನಾವು ಆಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದರು. ಹೆಚ್ಚು ಕೆಲಸವೂ ಆಗಿತ್ತು. ಬಳಿಕ ಬೊಮ್ಮಾಯಿಯವರ ಅವಧಿಯಲ್ಲಿ 95% ಸಿವಿಲ್ ಕಾಮಗಾರಿ ನಾವೇ ಪೂರ್ಣಗೊಳಿಸಿದ್ದೆವು. ಇವರ ಸರ್ಕಾರವೇ ಇರಲಿಲ್ಲ; ಇವರ ಸರ್ಕಾರವು ಬಿಎಂಆರ್‌ಸಿಎಲ್‌ಗೆ ಒಬ್ಬ ಪೂರ್ಣಾವಧಿ ಎಂ.ಡಿ ನೇಮಕಕ್ಕೆ ಮುಂದಾಗಲಿಲ್ಲ ಎಂದು ದೂರಿದರು. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು

ಕಳೆದ ವರ್ಷ ಜನವರಿಯಲ್ಲಿ 3 ತಿಂಗಳ ಹೋರಾಟದ ಬಳಿಕ ರಾಜ್ಯ ಸರ್ಕಾರವು ಮೊದಲ ಬಾರಿ ಪೂರ್ಣಾವಧಿ ಎಂ.ಡಿಯನ್ನು ಬೆಂಗಳೂರು ಮೆಟ್ರೋಗೆ ನೇಮಕ ಮಾಡಿತು. ಕೋಚ್ ಉತ್ಪಾದನಾ ಪ್ರದೇಶಕ್ಕೆ ನಾನು 3 ಬಾರಿ ಹೋಗಿ ಬಂದಿದ್ದೇನೆ. ಪೂರ್ಣಾವಧಿ ಎಂ.ಡಿ ಇಲ್ಲದ ಕಾರಣ ಎಂ.ಡಿ ಬಂದಿರಲಿಲ್ಲ. ರಾಜ್ಯ ಸರ್ಕಾರ ಬುಧವಾರ ಸಬರ್ಬನ್ ರೈಲಿಗೆ ಇನ್ನೊಬ್ಬ ಅಧಿಕಾರಿಯನ್ನು ನೇಮಿಸಿದೆ. ಅವರಿಗೆ ಇನ್ನೊಂದು ಇಲಾಖೆಯ ಪ್ರಭಾರ ಹುದ್ದೆ ಕೊಟ್ಟಿದೆ. ಸಬರ್ಬನ್ ರೈಲಿನ 4 ಕಾರಿಡಾರ್ ಕೆಲಸ ಇವತ್ತು ನಿಂತಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

ವೀಸಾ ಸಮಸ್ಯೆ ಬಗ್ಗೆಯೂ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮಾತನಾಡಿಲ್ಲ, ಟ್ವೀಟ್ ಮಾಡಿಲ್ಲ. ಕೇಂದ್ರದ ಸಚಿವರ ಜೊತೆಗೆ ಮಾತನಾಡಿಲ್ಲ. ಆರ್‌ಸಿಬಿ ಕ್ರಿಕೆಟ್ ಮ್ಯಾಚ್ ಗೆದ್ದಾಗ ಇವರೇ ಏನೋ ಸಿಕ್ಸರ್, ಫೋರ್ ಹೊಡೆದ ರೀತಿ ರಾಜ್ಯ ಸರ್ಕಾರ ಪೋಸ್ ಕೊಟ್ಟಿತ್ತು ಎಂದು ಟೀಕಿಸಿದರು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು

6 ಬಾರಿ ಕಾಗೆ ಹಾರಿಸಿದರು:
ಕ್ರಿಕೆಟ್ ಪಂದ್ಯದ ಅಷ್ಟೊಂದು ಕ್ರೆಡಿಟ್ ತೆಗೆದುಕೊಳ್ಳಲು ನಿಂತವರು ಇನ್ನು ಮೆಟ್ರೋದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಬರದೇ ಇರುತ್ತಾರಾ ಎಂದು ಕೇಳಿದರು. ಭೂಸ್ವಾಧೀನ, ವೀಸಾ ಸಮಸ್ಯೆಗಳು ಇದ್ದಾಗ ನೀವೆಲ್ಲಿದ್ದೀರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಉದ್ಘಾಟನೆಗೆ ಇನ್ನು 15 ದಿನ, ಇನ್ನು ಒಂದು ತಿಂಗಳು ಎಂದು 6 ಬಾರಿ ಕಾಗೆ ಹಾರಿಸಿದ್ದಾರೆ. ಮೊನ್ನೆ ನಾವೆಲ್ಲರೂ ಯೆಲ್ಲೋ ಲೈನಿನ ಪ್ರದೇಶದ 7 ಶಾಸಕರು, ಇಬ್ಬರು ಸಂಸದರು, ನಮ್ಮ ಜಿಲ್ಲಾಧ್ಯಕ್ಷರು, ನೂರಾರು ಜನ ಸಾರ್ವಜನಿಕರು ಸೇರಿ ಪ್ರಯತ್ನ ಮಾಡಿ ಹೋರಾಟ ಮಾಡಿ ಗಲಾಟೆ ಮಾಡಿದಾಗ ಆಗಸ್ಟ್ 15ರೊಳಗೆ ಮಾಡುತ್ತೇವೆ ಎಂದಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್

Share This Article