ಬೆಂಗಳೂರು | ತಾಯಿ ಮೇಲಿನ ಸಿಟ್ಟಿಗೆ ಬಾಲಕಿ ಹತ್ಯೆ ಕೇಸ್‌ – ಕೊಲೆಗೂ ಮುನ್ನ ಅತ್ಯಾಚಾರ ಎಸಗಿದ್ದ ಆರೋಪಿ

1 Min Read

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ (Whitefield) ತಾಯಿ ಮೇಲಿನ ಸಿಟ್ಟಿಗೆ 6 ವರ್ಷದ ಮಗಳ ಹತ್ಯೆ ಮಾಡಿದ್ದ ಆರೋಪಿ, ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂಬುದು ಗೊತ್ತಾಗಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಆರೋಪಿ ಅತ್ಯಾಚಾರ ಮಾಡಿರೋದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಆರೋಪಿ ಯೂಸೂಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಬಳಿಕ ಆರೋಪಿ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ. ಪೊಲೀಸರು ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಸ್ನೇಹಿತನ ಹೆಂಡ್ತಿ ಮೇಲಿನ ಸೇಡಿಗೆ 6 ವರ್ಷದ ಮಗಳ ಹತ್ಯೆ – ಆರೋಪಿ ಅಂದರ್‌

ಬಾಲಕಿಯನ್ನ ಅತ್ಯಾಚಾರ ಮಾಡಿ, ಬಳಿಕ ಹತ್ಯೆಗೈದು ಶವವನ್ನು ಮೋರಿಗೆ ಎಸೆದಿದ್ದ. ತಾಯಿ ಜೊತೆಗಿನ ಜಗಳಕ್ಕೆ ಮಗಳ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮೊದಲು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ವೇಳೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ.

ವಿಚಾರಣೆ ವೇಳೆ ಅತ್ಯಾಚಾರ ಮಾಡೋ ಉದ್ದೇಶಕ್ಕೆ ಚಾಕೋಲೇಟ್ ಕೊಡ್ತೀನಿ ಅಂತ ಆಸೆ ತೋರಿಸಿ ಕರೆದೊಯ್ದಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಆರೋಪಿಯನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಋತುಚಕ್ರದ ವೇಳೆ ಹೊಟ್ಟೆ ನೋವು ತಾಳದೆ ನೇಣಿಗೆ ಶರಣಾದ ಯುವತಿ

Share This Article