ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಇಂದೇ ತಗೋಬೇಕು ಪರ್ಮಿಷನ್!

Public TV
1 Min Read

ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ರಾಜ್ಯ ಸರ್ಕಾರ ಗಣೇಶ ಹಬ್ಬಕ್ಕೆ ಅನುಮತಿ ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಾರ್ಡ್‍ಗೆ ಒಂದೇ ಗಣೇಶ ಮೂರ್ತಿ, ಐದು ದಿನದ ಒಳಗೆ ಗಣೇಶ ಮೂರ್ತಿ ವಿಸರ್ಜನೆ ಸೇರಿದಂತೆ ಸರ್ಕಾರ ನಿಯಮ ಜಾರಿಗೆ ತಂದಿದೆ.

ನಾಳೆ ಗೌರಿ ಹಬ್ಬ, ನಾಡಿದ್ದು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇಂದೇ ಸಂಬಂಧ ಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿದೆ. ವಾರ್ಡ್ ಗೆ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋಬೇಕಿರೋ ಹಿನ್ನೆಲೆಯಲ್ಲಿ, ಇಂದೇ ಅಯಾ ವಲಯದ ಡಿಸಿಪಿ ಮತ್ತು ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್, ಬಿಬಿಎಂಪಿ ಎಇಇ ಬಳಿ ಅನುಮತಿ ಪಡೆಯಬೇಕು. ಅದಕ್ಕೂ ಮುನ್ನ, ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಫಾಲೋ ಮಾಡುವುದಾಗಿ ಪತ್ರ ಬರೆದುಕೊಡಬೇಕು. ಇದನ್ನೂ ಓದಿ: ಧವನ್ ದಾಂಪತ್ಯ ಜೀವನದಲ್ಲಿ ಬಿರುಕು- ವಿಚ್ಛೇದನಕ್ಕೆ ಮುಂದಾದ ಪತ್ನಿ

ಒಂದು ವೇಳೆ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ಕೂಡ ನೀಡಲಾಗಿದೆ. ಈ ನಡುವೆ ಪ್ರತಿ ಏರಿಯಾದಲ್ಲಿ ಬೇರೆ ಬೇರೆ ಸಂಘಟನೆಗಳುಣ ಸಮಿತಿಗಳು ಇದ್ದು, ಅವುಗಳ ಮಧ್ಯೆ ಅನುಮತಿಗಾಗಿ ಪೈಪೋಟಿ ಬಿಳುವ ಸಾಧ್ಯತೆ ಇದೆ. ಕೆಲವರು ಈಗಾಗಲೇ ಅನುಮತಿ ಪಡೆದಿದ್ದು, ಇನ್ನೂ ಕೆಲವರು ಇಂದು ಅನುಮತಿ ಪಡೆಯಲು ಕಾದಿದ್ದಾರೆ. ಒಬ್ಬರಿಗೆ ಅನುಮತಿ ಕೊಟ್ರೆ, ಅದೇ ಏರಿಯಾದ ಮತ್ತೊಬ್ಬರು ನಮಗೂ ಅನುಮತಿ ಕೊಡಿ ಅಂತಾ ಕೇಳುವ ಸಾಧ್ಯತೆ ಇದೆ. ಹಾಗಾಗಿ ಖುದ್ದು ಡಿಸಿಪಿ ನೇತೃತ್ವದಲ್ಲಿ ಈ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ಯನ್ನು ನೋಡಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.  ಇದನ್ನೂ ಓದಿ: ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ

Share This Article
Leave a Comment

Leave a Reply

Your email address will not be published. Required fields are marked *