ಬೆಂಗಳೂರು ಹೊರವಲಯದಲ್ಲಿ ಡಬಲ್‌ ಮರ್ಡರ್‌ ಕೇಸ್‌ – ಆರೋಪಿ ಬಂಧನ

By
1 Min Read

– ಸದಾ ಹೀಯಾಳಿಸುತ್ತಿದ್ದಕ್ಕೆ ಬೇಸತ್ತು ಕುಡಿದ ಮತ್ತಿನಲ್ಲಿ ಇಬ್ಬರಿಗೂ ರಾಡ್‌ನಿಂದ ಹೊಡೆದು ಕೊಲೆ

ಬೆಂಗಳೂರು: ಸಿಲಿಕಾನ್‌ ಸಿಟಿಯ ಹೊರವಲಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಬಸ್ ಸರ್ವಿಸ್ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಬಂಧಿತ ಆರೋಪಿ. ನಾಗೇಶ್ (55) ಮತ್ತು ಮಂಜುನಾಥ್ (50) ಎಂಬವರನ್ನ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ. ಇದನ್ನೂ ಓದಿ: ರೋಡ್ ರೇಜ್ ಪ್ರಕರಣಗಳ ತನಿಖೆಗಾಗಿ ಟ್ರಾಫಿಕ್ ಪೊಲೀಸರಿಗೆ ಅವಕಾಶ ನೀಡುವಂತೆ ಗೃಹ ಇಲಾಖೆಗೆ ಪತ್ರ

ಕುಡಿದ ನಶೆಯಲ್ಲಿ ಗಲಾಟೆ ಮಾಡಿಕೊಂಡು ರಾಡ್‌ನಿಂದ ತಲೆಗೆ ಹೊಡೆದು ಇಬ್ಬರ ಹತ್ಯೆ ಮಾಡಿದ್ದ. ನಾಗೇಶ್ ಮತ್ತು ಮಂಜುನಾಥ್‌ನಿಂದ ಸದಾ ಸುರೇಶ್‌ಗೆ ಬೈಯ್ಯುತ್ತಿದ್ದರು. ಕುಡಿದ ಬಳಿಕ ನೀನು ಕಳ್ಳ, ನಿನ್ನ ಮೇಲೆ ಕೇಸ್‌ಗಳಿವೆ ಎಂದು ಸದಾ ಹಿಯಾಳಿಸುತ್ತಿದ್ದರು.

ಕೊಲೆಯಾದ ಶುಕ್ರವಾರ ರಾತ್ರಿ ಕೂಡ ಕುಡಿದು ನಿಂದನೆ ಮಾಡಿದ್ದಾರೆ. ಇದರಿಂದ ಬೇಸತ್ತು ಇಬ್ಬರನ್ನ ರಾಡ್‌ನಿಂದ ಹೊಡದು ಕೊಲೆ ಮಾಡಿ ಆರೋಪಿ ಸುರೇಶ್‌ ಪರಾರಿಯಾಗಿದ್ದ. ಬೆಂಗಳೂರು ಉತ್ತರ ತಾಲೂಕಿನ ಸಿಂಗಹಳ್ಳಿ ಗ್ರಾಮದ ಬಳಿ ಕೊಲೆ ನಡೆದಿತ್ತು. ಇದನ್ನೂ ಓದಿ: ರಾಯಚೂರಿನಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳ – ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಿದ ಪೊಲೀಸರು

ಈ ಮೂವರು ಸಹ ಬಸ್‌ಗಳ ಸರ್ವಿಸ್ ಕೆಲಸ ಮಾಡಿಕೊಂಡಿದ್ದರು. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share This Article